ಕರ್ನಾಟಕ

karnataka

ETV Bharat / state

ವಲಸೆ ಎಫೆಕ್ಟ್​ನಿಂದ ಹಳ್ಳಿ ಹಳ್ಳಿಗೂ ಸೋಂಕು: 15 ದಿನದಲ್ಲಿ ಬೆಂಗಳೂರಲ್ಲಿ ಕಡಿಮೆಯಾದ ಕೊರೊನಾ

ವಲಸೆ ತೆರಳುತ್ತಿರುವ ಜನರಿಂದ ಕೊರೊನಾ ಹಳ್ಳಿಗಳಿಗೆ ಹಬ್ಬುತ್ತಿದೆ. ಆದರೆ ರಾಜ್ಯ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ.

bengaluru
ವಲಸೆ ಎಫೆಕ್ಟ್

By

Published : May 16, 2021, 1:54 PM IST

ಬೆಂಗಳೂರು:ವಲಸೆ ಎಫೆಕ್ಟ್​ನಿಂದ ಹಳ್ಳಿ ಹಳ್ಳಿಗೂ ಸೋಂಕು ಹರಡಿದ್ದು, ರಾಜಧಾನಿಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾದರೂ ಹಳ್ಳಿಗಳಲ್ಲಿ ಜಾಸ್ತಿಯಾಗುತ್ತಿದೆ. ಏ. 28ರಂದು ರಾಜ್ಯದ ಸೋಂಕಿತರಲ್ಲಿ ರಾಜಧಾನಿಯ ಪಾಲು ಶೇ. 58ರಷ್ಟಿತ್ತು. ಈಗ ಬೆಂಗಳೂರಿನ ಪಾಲು 34%, ಜಿಲ್ಲೆಗಳಲ್ಲಿ 66%ರಷ್ಟಿದೆ.

ಸೋಂಕು ಹೆಚ್ಚಳಗೊಂಡ ಟಾಪ್ 5 ಜಿಲ್ಲೆಗಳು

ಜಿಲ್ಲೆ ಏಪ್ರಿಲ್ 28 ಮೇ 14
ಹಾವೇರಿ 36 292
ಗದಗ 129 591
ಶಿವಮೊಗ್ಗ 333 1045
ಚಿತ್ರದುರ್ಗ 10 314
ಬೆಳಗಾವಿ 360 1592

15 ದಿನಗಳ ಅಂತರದಲ್ಲಿ ರಾಜಧಾನಿ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಟೆಸ್ಟಿಂಗ್ ಕಡಿಮೆ ಮಾಡಿದ್ದರೂ ಪಾಸಿಟಿವ್ ರೇಟ್ ಹೆಚ್ಚಾಗಿರುವುದು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ಕಂಡು ಬರುತ್ತಿದೆ.

ABOUT THE AUTHOR

...view details