ಕರ್ನಾಟಕ

karnataka

By

Published : Mar 29, 2019, 12:34 PM IST

ETV Bharat / state

10 ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಮೊಯ್ಲಿ ಕೊಡುಗೆ ಶೂನ್ಯ: ಕೆಜೆಪಿ ಅಭ್ಯರ್ಥಿ ಶಿಂಧೆ

ನಾಲ್ಕು ಸಂಸದರು ಗೆದ್ದು ದೆಹಲಿ ಪಾರ್ಲಿಮೆಂಟ್​​ಗೆ ಹೋಗಿದ್ದಾರೆ.. ಅವರು ಯಾರೂ ಈ ಕ್ಷೇತ್ರದ ಸಮಸ್ಯೆಗಳನ್ನು ಕೇಂದ್ರದ‌ ಮುಂದಿಡುವಂತಹ ಪ್ರಯತ್ನ ಮಾಡಲಿಲ್ಲ.. ನಾನಗೆ ಈ ಕ್ಷೇತ್ರದ ಸಮಸ್ಯೆಗಳೇನು ಅನ್ನೋದು ಗೊತ್ತಿದೆ. ನನ್ನನ್ನು ಗೆಲ್ಲಿಸಿದ್ದೇ ಆದಲ್ಲಿ ಇಲ್ಲಿನ ಸಮಸ್ಯೆಗಳನ್ನು ಕೇಂದ್ರಕ್ಕೆ ತಲುಪಿಸಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಲೋಕಸಭಾ ಕ್ಷೇತ್ರದ ಕೆ.ಜೆ.ಪಿ ಅಭ್ಯರ್ಥಿ ನಾಗೇಂದ್ರ ರಾವ್ ಶಿಂಧೆಹೇಳಿದರು.

ಕೆಜೆಪಿ ಅಭ್ಯರ್ಥಿ ಶಿಂಧೆ

ಚಿಕ್ಕಬಳ್ಳಾಪುರ/ಬೆಂಗಳೂರು:ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ನಾಲ್ವರು ಸಂಸದರು ಗೆದ್ದು ದೆಹಲಿ ಪಾರ್ಲಿಮೆಂಟ್​​ಗೆ ಹೋಗಿದ್ದಾರೆ. ಅವರು ಈ ಕ್ಷೇತ್ರದ ಸಮಸ್ಯೆಗಳ ಕುರಿತು ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕೆ.ಜೆ.ಪಿ ಅಭ್ಯರ್ಥಿ ನಾಗೇಂದ್ರ ರಾವ್ ಶಿಂಧೆ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಈಟಿವಿ ಭಾರತ​​ ಜೊತೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕೆಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದೇನೆ. ನಾನು ಆಂಧ್ರಪ್ರದೇಶದಲ್ಲಿ ಹುಟ್ಟಿದ್ದರೂ ಕಳೆದ 20 ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಜೀವನ ನಡೆಸಿ, ಸಾಮಾಜಿಕ ಕೆಲಸ ಮಾಡಿಕೊಂಡು ಬಂದಿದ್ದೇನೆ. ಈ ಕ್ಷೇತ್ರದ ಸಮಸ್ಯೆಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಈ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ವೀರಪ್ಪ ಮೊಯ್ಲಿ ಗೆದ್ದು ಸಂಸದರಾಗಿದ್ದರು. ಅವರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಆರೋಪಿಸಿದರು.

ಅಲ್ಲದೇ ಇ‌ದೇ ಕ್ಷೇತ್ರದಲ್ಲಿ ನಾಲ್ಕು ಸಂಸದರು ಗೆದ್ದು ದೆಹಲಿ ಪಾರ್ಲಿಮೆಂಟ್​​ಗೆ ಹೋಗಿದ್ದಾರೆ.. ಅವರು ಯಾರೂ ಈ ಕ್ಷೇತ್ರದ ಸಮಸ್ಯೆಗಳನ್ನು ಕೇಂದ್ರದ‌ ಮುಂದಿಡುವಂತಹ ಪ್ರಯತ್ನ ಮಾಡಲಿಲ್ಲ.. ನಾನಗೆ ಈ ಕ್ಷೇತ್ರದ ಸಮಸ್ಯೆಗಳೇನು ಅನ್ನೋದು ಗೊತ್ತಿದೆ. ನನ್ನನ್ನು ಗೆಲ್ಲಿಸಿದ್ದೇ ಆದಲ್ಲಿ ಇಲ್ಲಿನ ಸಮಸ್ಯೆಗಳನ್ನು ಕೇಂದ್ರಕ್ಕೆ ತಲುಪಿಸಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಕೆಜೆಪಿ ಅಭ್ಯರ್ಥಿ ಶಿಂಧೆ ಸಂದರ್ಶನ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆ, ಉದ್ಯೋಗ ಸಮಸ್ಯೆ, ಬಡತನ ಸೇರಿದಂತೆ ಹಲವಾರು ಸಮಸ್ಯೆಗಳಿವೆ.. ಈ ಎಲ್ಲಾ ಸಮಸ್ಯೆಗಳಿಗೆ ನಾನು ಪರಿಹಾರ ಒದಗಿಸುವಂತ ಪ್ರಯತ್ನ ಮಾಡುತ್ತೇನೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡರು ಮತ್ತು ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ನಡುವೆ ನೇರ ಫೈಟ್ ಅಂತ ಹೇಳುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು. ಅವರ ಅಭಿವೃದ್ಧಿ ಕಾರ್ಯಗಳು ಜನರಿಗೆ ಗೊತ್ತಿದೆ. ಯಾರಿಗೆ ಮತ ನೀಡಬೇಕು ಅನ್ನೋದು ಅವರಿಗೆ ತಿಳಿದಿದೆ. ಈ ಬಾರಿ ನನಗೆ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ನಾಗೇಂದ್ರ ರಾವ್​ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಹವಾ ಈ ಕ್ಷೇತ್ರದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮೋದಿ ಆರ್ಥಿಕವಾಗಿ ಮತ್ತು ಭದ್ರತೆಯ ವಿಷಯದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಏನೂ ಇಲ್ಲವೆಂದು ಶಿಂಧೆ ಆರೋಪಿಸಿದರು.

ABOUT THE AUTHOR

...view details