ಕರ್ನಾಟಕ

karnataka

ETV Bharat / state

ಟೆಂಪೋ ಚಾಲಕನ ಮೇಲೆ ಪೇದೆ ಹಲ್ಲೆ ಪ್ರಕರಣ: ಕಾನ್ಸ್​ಟೇಬಲ್ ಕೊನೆಗೂ ಎತ್ತಂಗಡಿ - ಪೊಲೀಸ್ ತರಬೇತಿ ವಿಭಾಗ

ಟೆಂಪೋ ಚಾಲಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಧಿಸಿದಂತೆ ಸಂಚಾರಿ ಮುಖ್ಯ ಪೇದೆ ಮಹಾಸ್ವಾಮಿ‌ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಪೊಲೀಸ್ ತರಬೇತಿ ವಿಭಾಗಕ್ಕೆ ಎತ್ತಂಗಡಿ‌ ಮಾಡಲಾಗಿದೆ.

ಎತ್ತಂಗಡಿ

By

Published : Sep 23, 2019, 11:46 AM IST

ಬೆಂಗಳೂರು:ಟೆಂಪೋ ಚಾಲಕನ ಮೇಲೆ ಹಲಸೂರು ಗೇಟ್ ಠಾಣೆಯ ಹೆಡ್ ಕಾನ್ಸ್​ಟೇಬಲ್ ಹಲ್ಲೆ ಮಾಡುವ ಮೂಲಕ ಮುಖ್ಯ ಪೇದೆ ಮಹಾಸ್ವಾಮಿ‌ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಅವರನ್ನು ಪೊಲೀಸ್ ತರಬೇತಿ ವಿಭಾಗಕ್ಕೆ ಎತ್ತಂಗಡಿ‌ ಮಾಡಲಾಗಿದೆ.

ಮಹಾಸ್ವಾಮಿಗೆ ಸೂಕ್ಷ್ಮ ಕೌಶಲಗಳ ತರಬೇತಿ ಅಗತ್ಯತೆ ಇದ್ದು, 10 ದಿನಗಳ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರ ಜೊತೆ ಯಾವ ರೀತಿ ವರ್ತಿಸಬೇಕು. ಹಾಗೆ ಜನಸ್ನೇಹಿ ಪೊಲೀಸ್ ಅಂದರೆ ಏನು ಎಂಬುದರ ಸಂಪೂರ್ಣ ತರಬೇತಿಯನ್ನ ಇಲ್ಲಿ ಪಡೆಯುವಂತೆ ಆದೇಶಿಸಲಾಗಿದೆ.

ಸಂಚಾರಿ ಪೊಲೀಸ​ನಿಂದ ಹಲ್ಲೆಗೊಳಗಾಗಿದ್ದ ಚಾಲಕನ ವಿರುದ್ಧವೇ ಪ್ರಕರಣ ದಾಖಲು..

ಈಗಾಗಲೇ ಘಟನೆ ಸಂಬಂಧ ಪ್ರಾಥಮಿಕ ತನಿಖೆ ನಡೆಸಿದ ಎಸಿಪಿ ರಂಗಸ್ವಾಮಿ ಅವರು, ಡಿಸಿಪಿ ಜಗದೀಶ್ ಮೂಲಕ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ. ಆರ್ . ರವಿಕಾಂತೇಗೌಡ ಅವರಿಗೆ ವರದಿ ನೀಡಿದ್ದರು. ಹೀಗಾಗಿ ಇಲಾಖೆ ವಿಚಾರಣೆಗೆ ಆದೇಶ ಹೊರಡಿಸಿದ್ದು, ಡಿವೈಎಸ್ಪಿ ನೇತೃತ್ವದಲ್ಲಿ ಈ ವಿಚಾರಣೆ ನಡೆಯಲಿದೆ. ಯಾವ ಕ್ರಮ ಜರುಗಿಸಬೇಕೆಂದು ಇಲಾಖೆ ನಿರ್ಧಾರ ಮಾಡಲಿದೆ.

ABOUT THE AUTHOR

...view details