ಕರ್ನಾಟಕ

karnataka

ETV Bharat / state

ನಾಳೆಯ ಕರ್ನಾಟಕ ಬಂದ್‌ಗೆ ಕಾಂಗ್ರೆಸ್​ನ ಸಂಪೂರ್ಣ ಬೆಂಬಲ.. ಕೆಪಿಸಿಸಿ ಸಾರಥಿ ಡಿಕೆಶಿ - DKS talk on Karnataka Bandh

ನಾವು ವಿಧಾನಸಭೆಯಲ್ಲಿ ಹೋರಾಟ ಮಾಡಿದೆವು. ನಾವು ಸಾವಿರಾರು ಪ್ರಶ್ನೆ ಕೇಳಿದ್ವಿ, ಅವರಿಗೆ ಉತ್ತರ ಕೊಡಲು ಆಗಲಿಲ್ಲ. ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ವ್ಯಕ್ತಿ ಪೂಜೆಗಿಂತ, ಪಕ್ಷ ಪೂಜೆ ಮೇಲೆ ನಂಬಿಕೆ ಇಟ್ಟವನು ನಾನು, ಅದರ ಮೇಲೆ ನಾನು ಕೆಲಸ ಮಾಡುತ್ತೇನೆ..

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

By

Published : Sep 27, 2020, 5:55 PM IST

ಬೆಂಗಳೂರು : ನಾಳೆ ಕರ್ನಾಟಕ ಬಂದ್ ನಡೆಯಲಿದೆ. ಅದಕ್ಕೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ಕೊಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇದೊಂದು ಪವಿತ್ರ ಸಮಾರಂಭ. ವೇದಿಕೆಯಲ್ಲಿ ಪಕ್ಷದ ಹಿರಿಯರು, ಕಾರ್ಯಕರ್ತರಿದ್ದಾರೆ. ಇಂದಿನ ಸಭೆಯ ಉದ್ದೇಶವೆಂದ್ರೆ, ರಂದೀಪ್ ಸಿಂಗ್ ಸುರ್ಜೇವಾಲಾ ನಮ್ಮ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಮುಂದೆ ಹೋಗಲಿದೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಕೋವಿಡ್ ಬಂತು. ಕೋವಿಡ್ ಬಂದ ನಂತರ ಪಕ್ಷದ ಕಚೇರಿ ಬಂದ್​ ಮಾಡಬೇಕು ಅಂದರು. ನಾವು ಈ ಸಮಯದಲ್ಲಿ ಪಕ್ಷದ ಜನರ ಪರ ಇರಬೇಕು. ಹಾಗಾಗಿ, ನಾವು ಕಾಂಗ್ರೆಸ್ ಕಚೇರಿಯನ್ನು ಬಂದ್​ ಮಾಡಿದೆವು. ಸರ್ಕಾರ ಮಾಡಬೇಕಾದ ಕೆಲಸವನ್ನು ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಡಿದ್ದಾರೆ. ನಮ್ಮ ಕೆಲಸಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.

ಕೊರೊನಾ ಸಂದರ್ಭದಲ್ಲಿ ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡಲಿಲ್ಲ. ಆದರೆ, ನಮ್ಮ ನಾಯಕರಾದ ನೀವು ಉತ್ತಮ ಕೆಲಸ ಮಾಡಿದ್ದೀರಿ. ಈ ಕೆಲಸವನ್ನು ಗಮನಿಸಿ ಸೋನಿಯಾ ಗಾಂಧಿ ಅವರು ನನಗೆ ಒಂದು ಪತ್ರ ಬರೆದಿದ್ದಾರೆ ಎಂದರು. ಕೊರೊನಾ ಸಂದರ್ಭದಲ್ಲಿ ನಾವು ಹಲವಾರು ಸಮಿತಿ ಮಾಡಿ ಕೆಲಸ ಮಾಡಿದ್ದೇವೆ. ಆರೋಗ್ಯ ಹಸ್ತ ಎಂಬ ಕಾರ್ಯಕ್ರಮ ಮಾಡಿದೆವು. ಇದು ದೇಶದಲ್ಲಿ ಮಾದರಿ ಕೆಲಸವಾಯಿತು. ಇನ್ನು, ಗ್ರಾಮ ಪಂಚಾಯತ್‌ ಚುನಾವಣೆ ಆಗಮಿಸುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಎಲ್ಲಾ ಬೂತ್ ಮಟ್ಟದಲ್ಲಿ ಪಕ್ಷ ಕಟ್ಟಬೇಕಿದೆ ಎಂದರು.

ನಾವು ವಿಧಾನಸಭೆಯಲ್ಲಿ ಹೋರಾಟ ಮಾಡಿದೆವು. ನಾವು ಸಾವಿರಾರು ಪ್ರಶ್ನೆ ಕೇಳಿದ್ವಿ, ಅವರಿಗೆ ಉತ್ತರ ಕೊಡಲು ಆಗಲಿಲ್ಲ. ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ವ್ಯಕ್ತಿ ಪೂಜೆಗಿಂತ, ಪಕ್ಷ ಪೂಜೆ ಮೇಲೆ ನಂಬಿಕೆ ಇಟ್ಟವನು ನಾನು, ಅದರ ಮೇಲೆ ನಾನು ಕೆಲಸ ಮಾಡುತ್ತೇನೆ. ಸೋನಿಯಾ ಗಾಂಧಿ ಅವರು ಹೊಸದಾಗಿ ಸಮಿತಿ ರಚನೆ ಮಾಡಿದ್ದಾರೆ. ನಮ್ಮ ರಾಜ್ಯದಿಂದ ಹಲವಾರು ನಾಯಕರಿಗೆ ಅವಕಾಶ ಸಿಕ್ಕಿದೆ ಎಂದರು.

ABOUT THE AUTHOR

...view details