ಬೆಂಗಳೂರು: ಟಿಪ್ಪು ಸುಲ್ತಾನ್ ನನ್ನು ಇತಿಹಾಸ ಪಠ್ಯದಿಂದ ತೆಗೆಯಲು ಮುಂದಾಗಿರುವ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಹಾಗೂ ಬಸವಣ್ಣನವರನ್ನೂ ತೆಗೆಯಲಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಸಂಘ ಪರಿವಾರದ ಗುಪ್ತಕಾರ್ಯಸೂಚಿಗಳಿಗಾಗಿ ಇತಿಹಾಸ ತಿರುಚುವುದು ಸರಿಯೇ? ರಾಜ್ಯ ಬಿಜೆಪಿ ಇಂದು ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯುವುದಾಗಿ ಹೇಳಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಬಿಜೆಪಿಗರು ಮುಂದೊಮ್ಮೆ ಅಂಬೇಡ್ಕರ್ ಅವರಿಗೂ ಇದೇ ರೀತಿ ಮಾಡದಿರುವರೆ? ಸಿಎಂ ಬಿ.ಎಸ್. ಯಡಿಯೂರಪ್ಪ ಆಡಳಿತಾನಂತರ ಬಸವಣ್ಣನವರಿಗೂ ಇದೇ ರೀತಿ ಮಾಡದಿರುವರೆ? ಎಂದು ಪ್ರಶ್ನಿಸಿದೆ.
ಇಂದಿರಾ ಗಾಂಧಿ ಸರ್ದಾರ್ ಪಟೇಲ್ಗೆ ನಮನ:
ಟ್ವೀಟ್ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇಬ್ಬರು ನಾಯಕರಿಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕ ನಮನ ಸಲ್ಲಿಸಿದೆ.