ಕರ್ನಾಟಕ

karnataka

ETV Bharat / state

ಪ್ರಣಬ್​ ಮುಖರ್ಜಿ ಆರೋಗ್ಯ ಚೇತರಿಕೆಗೆ ಕಾಂಗ್ರೆಸ್​ ನಾಯಕರ ಹಾರೈಕೆ! - ಮಾಜಿ ರಾಷ್ಟ್ರಪತಿ ಪ್ರಣಬ್​

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರಿಗೆ ಕೊರೊನಾ ವೈರಸ್​ ತಗುಲಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ರಾಜ್ಯ ಕಾಂಗ್ರೆಸ್​ ಮುಖಂಡರು ಟ್ವೀಟ್​ ಮಾಡಿದ್ದಾರೆ.

Congress leaders
Congress leaders

By

Published : Aug 11, 2020, 3:30 AM IST

ಬೆಂಗಳೂರು:ಕೋವಿಡ್-19 ಸೋಂಕು, ಹಾಗೂ ಶಸ್ತ್ರಚಿಕಿತ್ಸೆಗೊಳಗಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆದಷ್ಟು ಶೀಘ್ರ ಚೇತರಿಸಿಕೊಂಡು ಗುಣಮುಖರಾಗಲಿ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಶುಭ ಹಾರೈಸಿದ್ದಾರೆ.

ಈ ಸಂಬಂಧ ಟ್ವೀಟ್ ಮೂಲಕ ಕಾಂಗ್ರೆಸ್​ ನಾಯಕರು ಶುಭ ಹಾರೈಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಟ್ವೀಟ್​ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಟ್ವೀಟರ್​​ನಲ್ಲಿ, ಕೋವಿಡ್​-19ನಿಂದ ಬಳಲುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆದಷ್ಟು ಬೇಗ ಗುಣಮುಖರಾಗಲಿ, ಉತ್ತಮ ಆರೋಗ್ಯದೊಂದಿಗೆ ಆಸ್ಪತ್ರೆಯಿಂದ ಹೊರಬರಲಿ ಎಂದು ಆಶಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಭಾರತದ ಮಾಜಿ ರಾಷ್ಟ್ರಪತಿಗಳು, ದೇಶದ ಮಾರ್ಗದರ್ಶಕರು, ನಮ್ಮೆಲ್ಲರ ನೆಚ್ಚಿನ ನಾಯಕರಾದ ಪ್ರಣಬ್​ ಮುಖರ್ಜಿಯವರಿಗೆ ಕೋವಿಡ್ ಸೋಂಕು ತಗುಲಿರುವುದು ದುಃಖದ ವಿಷಯ. ಪ್ರಣಬ್​ ಮುಖರ್ಜಿಯವರು ಶೀಘ್ರ ಗುಣಮುಖರಾಗಿ ಮತ್ತೆ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಲಿ. ನಮ್ಮೆಲ್ಲರ ಹಾರೈಕೆ ಮತ್ತು ಪ್ರಾರ್ಥನೆ ಅವರ ಜೊತೆಗಿದೆ ಎಂದಿದ್ದಾರೆ

ತಮಗೆ ಕೊರೊನಾ ಸೋಂಕು ಇರುವ ಬಗ್ಗೆ ಪ್ರಣಬ್ ಮುಖರ್ಜಿ ಅವರೇ ಟ್ವೀಟ್ ಮಾಡಿ ವಿವರ ನೀಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಸಹ ನಡೆಸಲಾಗಿದೆ.

ABOUT THE AUTHOR

...view details