ಕರ್ನಾಟಕ

karnataka

ETV Bharat / state

ಶೇಷಾದ್ರಿಪುರ ಅಂಧರ ಶಾಲೆ ಮಕ್ಕಳಿಗೆ ಆಹಾರ ಪೂರೈಸಿದ ಕಾಂಗ್ರೆಸ್ ನಾಯಕರು - Congress leaders

ಕವಿಕಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಸ್​.ಮನೋಹರ್ ನೇತೃತ್ವದಲ್ಲಿ ಕರ್ನಾಟಕ ಅಂಧರ  ಶಾಲೆಯ ಮಕ್ಕಳಿಗೆ ಆಹಾರ, ಅಗತ್ಯ ವಸ್ತುಗಳು ಹಾಗೂ ಸ್ಯಾನಿಟೈಸರ್​ಗಳನ್ನು ನೀಡಿದರು.

ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ನಾಯಕರು

By

Published : Apr 23, 2020, 2:28 PM IST

ಬೆಂಗಳೂರು: ನಗರದ ಶೇಷಾದ್ರಿಪುರಂ ಬಳಿಯಿರುವ ಕರ್ನಾಟಕ ಅಂಧರ ಶಾಲೆಯ ಮಕ್ಕಳಿಗೆ ಕಾಂಗ್ರೆಸ್ ನಾಯಕರು ಊಟ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿದರು.

ಕವಿಕಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಸ್ ಮನೋಹರ್ ನೇತೃತ್ವದಲ್ಲಿ ಕರ್ನಾಟಕ ಅಂಧರ ಶಾಲೆಯ ಮಕ್ಕಳಿಗೆ ಆಹಾರ, ಅಗತ್ಯ ವಸ್ತುಗಳು ಹಾಗೂ ಸ್ಯಾನಿಟೈಸರ್​ಗಳನ್ನು ನೀಡಿದರು.

ಅಂಧ ಮಕ್ಕಳು ಹಾಗೂ ಸಂಕಷ್ಟದಲ್ಲಿರುವವರಿಗೆ ಆಹಾರ ಪೂರೈಸಿದ ಕಾಂಗ್ರೆಸ್ ನಾಯಕರು

ಈ ವೇಳೆ ಮಾತನಾಡಿದ ಮನೋಹರ್, ಕಳೆದ 28 ದಿನಗಳಿಂದ ಬೆಂಗಳೂರಿನ ರಾಜಾಜಿನಗರ ಹಾಗೂ ಮಹಾಲಕ್ಷ್ಮಿಪುರ ಸುತ್ತ ಮುತ್ತ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಆಹಾರ ನೀಡುತ್ತಿದ್ದೇವೆ. ನಿತ್ಯ ಸುಮಾರು 600 ರಿಂದ 700 ಜನರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ರಾಮಲಿಂಗರೆಡ್ಡಿ ಮಾರ್ಗದರ್ಶನದಲ್ಲಿ ಆಹಾರ ಪೂರೈಕೆ ಮಾಡುತ್ತಿದ್ದೇವೆ ಎಂದರು.

ABOUT THE AUTHOR

...view details