ಕರ್ನಾಟಕ

karnataka

ETV Bharat / state

ಉಂಡ ಮನೆಗೆ ಕನ್ನ ಆರೋಪ.. ಕೈ ಮುಖಂಡನ ಮನೆ ಗುಡಿಸಿ ಗುಂಡಾಂತರ ಮಾಡಿ ನೇಪಾಳಿ ದಂಪತಿ ಎಸ್ಕೇಪ್​

ಕಾಂಗ್ರೆಸ್​ ಮುಖಂಡ ಚಂದ್ರಶೇಖರ್ ಅವರು ಮಂಗಳೂರು ಕಡೆ ದೇವಾಲಯದ ದರ್ಶನಕ್ಕೆಂದು ಹೋದ ಸಂದರ್ಭದಲ್ಲಿ ಮನೆ ಕಾವಲಿಗಿದ್ದ ನೇಪಾಳಿ ಮೂಲದವರು ಮನೆಯಲ್ಲಿದ್ದ 50ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಆರೋಪ ಕೇಳಿಬಂದಿದೆ.

congress leader house theft by Nepalis family security
ಕಾಂಗ್ರೆಸ್ ಮುಖಂಡ ಚಂದ್ರಶೇಖರ್

By

Published : Mar 13, 2022, 6:53 PM IST

ಬೆಂಗಳೂರು:ನಗರದ ಕೊತ್ತನೂರು ದಿಣ್ಣೆ ಬಳಿಯ ಕ್ಲಾಸಿಕ್ ಆರ್ಚಿಟ್ ಲೇಔಟ್​ನಲ್ಲಿ ಮನೆ ಕೆಲಸಕ್ಕಿದ್ದ ನೇಪಾಳ ಮೂಲದ ದಂಪತಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಅಲಿಯಾಸ್ ಬಾರ್ ಚಂದ್ರಪ್ಪ ಮನೆಯಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 10 ರಂದು ಚಂದ್ರಶೇಖರ್ ಕುಟುಂಬಸ್ಥರು ಧರ್ಮಸ್ಥಳಕ್ಕೆ ಮಂಜುನಾಥಸ್ವಾಮಿ ದರ್ಶನಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನೇಪಾಳ‌ ಮೂಲದ ದಂಪತಿ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಈ ದಂಪತಿ ಇತರರನ್ನು ಕರೆಸಿಕೊಂಡು ಕಳ್ಳತನ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಮನೆಯಲ್ಲಿದ್ದ 50 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದಾಗಿ ದೂರು ದಾಖಲಾಗಿದೆ.

ಈ ಕುರಿತು ಮನೆ ಮಾಲೀಕ ಚಂದ್ರಶೇಖರ್ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೇಲಿಯೇ ಎದ್ದು ಹೊಲ ಮೇಯ್ದಾಗ.. ಗಾಂಜಾ ಕಳ್ಳಸಾಗಣೆ ಆರೋಪದಡಿ ASI ಸೇರಿ ನಾಲ್ವರ ಬಂಧನ

ABOUT THE AUTHOR

...view details