ಬೆಂಗಳೂರು: ಬಿಬಿಎಂಪಿ ಸ್ಥಾಯಿ ಸಮಿತಿಗಳ ಅಧಿಕಾರವಧಿ ವಿಚಾರವಾಗಿ ಬಿಜೆಪಿ ಹಾಗೂ ಮೈತ್ರಿ ಪಕ್ಷದ ಗುದ್ದಾಟ ಮತ್ತೆ ಮುಂದುವರೆದಿದೆ.
ಸ್ಥಾಯಿ ಸಮಿತಿಗೆ ಒಂದು ವರ್ಷ ಅಧಿಕಾರ ನೀಡುವಂತೆ ಕಾಂಗ್ರೆಸ್-ಜೆಡಿಎಸ್ ಮನವಿ - Standing Committee
ಮೇಯರ್ ಚುನಾವಣೆ ಜೊತೆಯಲ್ಲೇ ಸ್ಥಾಯಿ ಸಮಿತಿ ಚುನಾವಣೆ ನಡೆಸಬೇಕೆಂದು ಬಿಜೆಪಿ ಮನವಿ ಸಲ್ಲಿಸಿದ ಬೆನ್ನಲ್ಲೇ ಮೈತ್ರಿ ಪಕ್ಷವೂ ಎಚ್ಚೆತ್ತು, ಪ್ರಾದೇಶಿಕ ಚುನಾವಣೆ ಆಯುಕ್ತರ ಮೊರೆ ಹೋಗಿದೆ.
ಮೇಯರ್ ಚುನಾವಣೆ ಜೊತೆಯಲ್ಲೇ ಸ್ಥಾಯಿ ಸಮಿತಿ ಚುನಾವಣೆ ನಡೆಸಬೇಕೆಂದು ಬಿಜೆಪಿ ಮನವಿ ಸಲ್ಲಿಸಿದ ಬೆನ್ನಲ್ಲೇ ಮೈತ್ರಿ ಪಕ್ಷವೂ ಎಚ್ಚೆತ್ತು, ಪ್ರಾದೇಶಿಕ ಚುನಾವಣೆ ಆಯುಕ್ತರ ಮೊರೆ ಹೋಗಿದೆ.
ಬಿಬಿಎಂಪಿಯ ಹನ್ನೆರಡು ಸ್ಥಾಯಿ ಸಮಿತಿಗಳ ಅಧಿಕಾರಾವಧಿ ಕೆಎಂಸಿ ಕಾಯ್ದೆಯ ಪ್ರಕಾರ ಒಂದು ವರ್ಷ ಇದ್ದು, ಚುನಾವಣೆಯನ್ನು ಡಿಸೆಂಬರ್ ನಲ್ಲೇ ನಡೆಸಿ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಆಡಳಿತ ಪಕ್ಷದ ನಾಯಕ ವಾಜಿದ್ ಹಾಗೂ ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಮನವಿ ಮಾಡಿದ್ದಾರೆ. 2018 ರಲ್ಲಿ ಮೇಯರ್, ಉಪಮೇಯರ್ ಚುನಾವಣೆ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದು, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸದಸ್ಯರ ಚುನಾವಣೆ 2018 ರ ಡಿಸೆಂಬರ್ನಲ್ಲಿ ನಡೆದಿತ್ತು. ಚುನಾವಣೆ ಸಭೆಯಲ್ಲೇ ಒಂದು ವರ್ಷದವರೆಗೆ ಅವಧಿ ಎಂದು ತಿಳಿಸಲಾಗಿದೆ. ಹೀಗಾಗಿ, 4 ಡಿಸೆಂಬರ್ 2019ರವರೆಗೂ ಅಧಿಕಾರವಧಿ ಇದ್ದು, ಡಿಸೆಂಬರ್ ತಿಂಗಳಲ್ಲೇ ಚುನಾವಣೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.