ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​ ಮುಖಂಡ ದಯಾನಂದಮೂರ್ತಿ ಜೆಡಿಎಸ್​ಗೆ​ ಸೇರ್ಪಡೆ - Former Prime Minister, JDS leader HD Deve Gowda

ಮಹಾಲಕ್ಷಿ ಲೇಔಟ್ ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಿದ್ದ ಅವರು ಮತ್ತೆ ಜೆಡಿಎಸ್​ ಕಡೆ ಮುಖ ಮಾಡಿದ್ದು, ದಯಾನಂದಮೂರ್ತಿಯನ್ನು ಜೆಡಿಎಸ್​ಗೆ ಕರೆತರುವ ಮೂಲಕ ಅನರ್ಹ ಶಾಸಕ ಗೋಪಾಲಯ್ಯಗೆ ದೇವೇಗೌಡ್ರು ಸೆಡ್ಡು ಹೊಡೆದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಜೆಡಿಎಸ್​ಗೆ

By

Published : Aug 29, 2019, 7:32 PM IST

ಬೆಂಗಳೂರು:ಮಹಾಲಕ್ಷಿ ಲೇಔಟ್ ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಇಂದು ಜೆಡಿಎಸ್​​ಗೆ ಸೇರ್ಪಡೆಯಾಗಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ದಯಾನಂದಮೂರ್ತಿ ಹಾಗೂ ಬೆಂಬಲಿಗರಿಗೆ ಪಕ್ಷದ ಸದಸ್ಯತ್ವ ಪತ್ರ ನೀಡಿ ದೇವೇಗೌಡರು ಬರಮಾಡಿಕೊಂಡರು. ಈ ಮೂಲಕ ಮಹಾಲಕ್ಷ್ಮಿ ಲೇಔಟ್ ಅನರ್ಹ ಗೋಪಾಲಯ್ಯಗೆ ಪರ್ಯಾಯ ನಾಯಕನನ್ನು ದೇವೇಗೌಡರು ಕರೆತಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜೆಡಿಎಸ್ ಸೇರ್ಪಡೆ ಬಳಿಕ ದಯಾನಂದಮೂರ್ತಿ ಮಾತನಾಡಿ, ಈ ಹಿಂದೆ ಜೆಡಿಎಸ್​​​ನಲ್ಲೇ ಇದ್ದೆ. ಕೆಲ ಕಾರಣಾಂತರಗಳಿಂದ ಮನೆ ಬಿಡಬೇಕಾಯಿತು. ಈಗ ಮತ್ತೆ ನಮ್ಮ ಮನೆಗೆ ವಾಪಸಾಗಿದ್ದೇನೆ. ನಾನು ತಪ್ಪು ಮಾಡಿದ್ದರೆ ನನನ್ನು ಕ್ಷಮಿಸಬೇಕು ಎಂದು ದೇವೇಗೌಡರಿಗೆ ಕ್ಷಮೆ ಕೋರಿದರು.

ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಜೆಡಿಎಸ್​ಗೆ

ಜೆಡಿಎಸ್ ವರಿಷ್ಠ ದೇವೇಗೌಡ ಮಾತನಾಡಿ, ಪಕ್ಷ ಬಿಟ್ಟು ಹೋದ ಎಂಟು ಜನರ ಪೈಕಿ ಇವರೂ ಒಬ್ಬರು. ಈ ಮೊದಲು ಪಕ್ಷ ಬಿಟ್ಟು ಹೋದವರನ್ನು ಕರೆದುಕೊಂಡು ಬಂದು ಟಿಕೆಟ್ ನೀಡಿ ತಪ್ಪು ಮಾಡಿದ್ದೇನೆ. ನೀನು ಏಕೆ ಸಾರಿ ಕೇಳುತ್ತೀಯಾ ಎಂದು ದಯಾನಂದಮೂರ್ತಿಗೆ ನಗುತ್ತಲೇ ಹೇಳಿದರು. ಉಪ ಚುನಾವಣೆ ಬರುತ್ತದೆಯೋ, ಇಲ್ಲವೋ. ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ ಏನಾಗುತ್ತದೋ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡುವುದಿಲ್ಲ. ನಾವು ಪಕ್ಷ ಸಂಘಟನೆ ಮಾಡುವುದರ ಜೊತೆಗೆ ಪಕ್ಷ ಬಲಪಡಿಸೋಣ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಕೆಆರ್​ಎಸ್​ಗೆ ಬಾಗಿನ ಅರ್ಪಿಸುವ ಸಂದರ್ಭ ನಮ್ಮ ಪಕ್ಷದ ಶಾಸಕರಾದ ಪುಟ್ಟರಾಜು, ತಮ್ಮಣ್ಣ ಸೇರಿದಂತೆ ಎಲ್ಲರೂ ಹೋಗಿದ್ದಾರೆ. ಹಾಗೆಂದ ಮಾತ್ರಕ್ಕೆ ಪಕ್ಷ ಬಿಟ್ಟು ಹೋಗುತ್ತಾರೆ ಅನ್ನುವ ಭಾವನೆ ಯಾರಿಗೂ ಬೇಡ. ಮಹಾಲಕ್ಷ್ಮಿ ಲೇಔಟ್​ನಲ್ಲಿ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.

ಬಿಬಿಎಂಪಿ ಉಪ ಮೇಯರ್ ಭದ್ರೇಗೌಡ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details