ಬೆಂಗಳೂರು:ಗಲಾಟೆ ಏನಿಲ್ಲ, ಸಿಂಪಲ್ ವರ್ಗಾವಣೆ ಇತ್ತು. ಅದರ ಬಗ್ಗೆ ಬನ್ನಿ ಮಾತನಾಡೋಣ ಎಂದಿದ್ದೆ. ಶಾಸಕ ಬೆಳ್ಳಿ ಪ್ರಕಾಶ್ ಸ್ವಲ್ಪ ಏಕವಚನದಲಿ ಮಾತಾಡಿದ್ರು. ಅದಕ್ಕೆ ನನಗೆ ಸ್ವಲ್ಪ ಬೇಜಾರಾಯ್ತು ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.
ಬೆಳ್ಳಿ ಪ್ರಕಾಶ್ ಏಕವಚನದಲ್ಲಿ ಮಾತನಾಡಿದ್ರು ಅಷ್ಟೆ, ಗಲಾಟೆ ಏನಿಲ್ಲ: ಸಚಿವ ನಾರಾಯಣಗೌಡ ಸ್ಪಷ್ಟನೆ - Minister Narayana Gowda news
ವಿಧಾನಸೌಧದಲ್ಲಿ ಇಂದು ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ಅವರ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ಮಾತನಾಡಿದ ನಾರಾಯಣಗೌಡ ಅವರು, ನಮ್ಮ ನಡುವೆ ಗಲಾಟೆ ಏನೂ ಆಗಿಲ್ಲ. ಅವರು ಸ್ವಲ್ಪ ಏಕ ವಚನದಲ್ಲಿ ಮಾತನಾಡಿದ್ದು ಸರಿಯಲ್ಲ. ನನ್ನ ಮೇಲೆ ಯಾವ ಮುಷ್ಠಿ ಪ್ರಹಾರ ಮಾಡಿಲ್ಲ ಎಂದಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಗಲಾಟೆ ಸಂಬಂಧ ಸುದ್ದಿಗಾರರಿಗೆ ಸ್ಪಷ್ಟೀಕರಣ ನೀಡಿದ ಅವರು, ಇನ್ಮುಂದೆ ಹೀಗೆಲ್ಲಾ ಮಾತನಾಡಬಾರದು ಅಷ್ಟೇ. ಅವರು ಮಾತಾಡೋದು ರಫ್. ಹಾಗಂತ ಅವರು ಆ ರೀತಿ ಮಾತಾಡ ಕೂಡದು. ಒಂದು ವೇಳೆ ಸಿಎಂ ನನ್ನನ್ನು ಕರೆದ್ರೆ ನಾನು ಹೋಗಿ ಮಾತಾಡುತ್ತೇನೆ. ಅವರು ಏನೋ ಶಬ್ದ ಬಳಕೆ ಮಾಡಿದ್ರು. ಅದರಿಂದ ನನಗೆ ತುಂಬಾ ಬೇಜಾರು ಆಯ್ತು. ಇನ್ಮುಂದೆ ಅವರು ಈ ರೀತಿ ಮಾತಾಡಬಾರದು ಅಷ್ಟೇ ಎಂದು ಶಾಸಕ ಬೆಳ್ಳಿ ಪ್ರಕಾಶ್ಗೆ ವಾರ್ನ್ ಮಾಡಿದರು.
ನಮ್ಮ ನಡುವೆ ಗಲಾಟೆ ಏನೂ ಆಗಿಲ್ಲ. ಅವರು ಕೇಳಿದ್ದು ಟೆಕ್ನಿಕಲ್ ವಿಷಯವಾಗಿತ್ತು. ಮಧ್ಯಾಹ್ನ ಲಂಚ್ ಅವರ್ನಲ್ಲಿ ಮಾತನಾಡೋಣ ಎಂದಿದ್ದೆ. ಅವರು ಸ್ವಲ್ಪ ಏಕ ವಚನದಲ್ಲಿ ಮಾತನಾಡಿದ್ದು ಸರಿಯಲ್ಲ. ನನ್ನ ಮೇಲೆ ಯಾವ ಮುಷ್ಠಿ ಪ್ರಹಾರ ಮಾಡಿಲ್ಲ. ಇದೊಂದು ಚಿಕ್ಕವಿಷಯ. ಅವರು ಫೈಲ್ ಕೊಟ್ಟಿದ್ದು ಗಮನಕ್ಕೆ ಬಂದಿಲ್ಲ. ಕೊಟ್ಟಿದ್ದರೆ ಆಫೀಸಿನಲ್ಲಿ ಪರಿಶೀಲನೆ ಮಾಡಬೇಕಲ್ವಾ?, ನನ್ನ ಮೇಲೆ ಅವರು ಆ ಲಾಂಗ್ವೇಜ್ ಬಳಸಬೇಕಿರಲಿಲ್ಲ. ಬೆಳ್ಳಿ ಪ್ರಕಾಶ್ ವರ್ಗಾವಣೆ ಕೇಳಿದ್ದಕ್ಕೆ ಆಗಿಲ್ಲ. ಕೆಲವೊಂದು ಕಾರಣಕ್ಕೆ ಲೇಟಾಗಿರಬಹುದು. ಅವರ ಜೊತೆ ಏನೂ ಗಲಾಟೆ ನಡೆದಿಲ್ಲ ಎಂದರು.