ಬೆಂಗಳೂರು :ಒಂದು ದೇಶ, ಒಂದು ಕಾರ್ಡ್ ಮಾದರಿಯಲ್ಲಿ ನಗರದ ಎಲ್ಲ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಾಮನ್ ಮೊಬಿಲಿಟಿ ಕಾರ್ಡ್ ಸೌಲಭ್ಯ ಪ್ರಾರಂಭವಾಗಿದೆ. ನಮ್ಮ ಮೆಟ್ರೋ ಸಂಸ್ಥೆ ರತ್ನಾಕರ ಬ್ಯಾಂಕ್ ಸಹಯೋಗದಲ್ಲಿ ಮೊಬಿಲಿಟಿ ಕಾರ್ಡ್ ಸೇವೆ ಆರಂಭಿಸಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನಂತೆ ಮೊಬಿಲಿಟಿ ಕಾರ್ಡ್‍ಗಳನ್ನು ರಿಚಾರ್ಜ್ ಮಾಡಿ ಉಪಯೋಗಿಸಬಹುದಾಗಿದೆ.
6 ಲಕ್ಷಕ್ಕೂ ಹೆಚ್ಚು ಮೆಟ್ರೋ ರೈಲು ಬಳಕೆದಾರರಿಗೆ ಎನ್‌ಸಿಎಂಸಿ ಕಾರ್ಡ್ ಬಳಕೆಗೆ ಲಭ್ಯವಾಗಲಿದೆ. ಮೆಟ್ರೋ ನಿಲ್ದಾಣದಲ್ಲಿರುವ ಆರ್ಬಿಎಲ್ ಬ್ಯಾಂಕ್ ಶಾಖೆಗಳಲ್ಲಿ ಈ ಕಾರ್ಡ್ ಪಡೆಯಬಹುದಾಗಿದೆ. ಕಾರ್ಡ್ ಬಳಕೆಗೆ ಮೆಟ್ರೋಗೆ ಆರ್.ಬಿ.ಎಲ್ ನಿಂದ ಪಿಒಎಸ್ ಸೌಲಭ್ಯವಿರಲಿದೆ. ಇದೆ ಕಾರ್ಡ್ನಿಂದ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಳ್ಳಬಹುದಾಗಿದೆ.
ಶಾಪಿಂಗ್‍ಮಾಲ್ ಮತ್ತು ಟೋಲ್‍ಗಳಲ್ಲಿರುವ ಪಾರ್ಕಿಂಗ್ ಶುಲ್ಕವನ್ನು ಇದೇ ಕಾರ್ಡ್‍ಗಳಿಂದ ಪಾವತಿಸಬಹುದಾಗಿದೆ. ಮೊಬಿಲಿಟಿ ಕಾರ್ಡ್ ಆಪ್ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಈ ಕಾರ್ಡ್ ಉಪಯೋಗಿಸಲು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ರುಪೇ ಮೊಬಿಲಿಟಿ ಕಾರ್ಡ್ ಬಳಸಿ ಪಯಣಿಸಿದ ಮೋದಿ :ಶನಿವಾರ (ಮಾ. 25) ದಂದು ನಮ್ಮ ಮೆಟ್ರೋದ ಮೊದಲ ರೂಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)ನ್ನು ಬಳಸಿ ಪ್ರಧಾನಮಂತ್ರಿ ಮೋದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಸಾರ್ವಜನಿಕರಿಗೆ ಮಾರ್ಚ್ 30 ರಿಂದ ಮೆಟ್ರೋ ನಿಲ್ದಾಣಗಳಲ್ಲಿ ಆರ್.ಬಿ.ಎಲ್ ಬ್ಯಾಂಕ್ ರೂಪೇ ಎನ್‌ಸಿಎಂಸಿ ಕಾರ್ಡ್‌ಗಳು ದೊರೆಯಲಿದೆ ಎಂದು ತಿಳಿಸಿತ್ತು.