ಕರ್ನಾಟಕ

karnataka

ETV Bharat / state

ಸಿಲಿಕಾನ್ ಸಿಟಿಯಲ್ಲಿ‌ ಕ್ರೈಂ ತಡೆಗಟ್ಟಲು ಕಮಿಷನರ್​​ ಖಡಕ್​ ವಾರ್ನಿಂಗ್​​​! - ಭಾಸ್ಕರ್ ರಾವ್

ಬೆಂಗಳೂರಿನಲ್ಲಿ ದಿನಕ್ಕೊಂದು ಕ್ರೈಂಗಳು ನಡೆಯುತ್ತಿವೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ‌ ಕ್ರೈಂ ತಡೆಗಟ್ಟಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಲ್ಲಾ ಸಿಬ್ಬಂದಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಸಿಬ್ಬಂದಿಗಳಿಗೆ ಕಮಿಷನರ್ ಖಡಕ್ ಸೂಚನೆ

By

Published : Aug 26, 2019, 4:50 PM IST

ಬೆಂಗಳೂರು:ನಗರದಲ್ಲಿ ದಿನಕ್ಕೊಂದು ಕ್ರೈಂ ಘಟನೆಗಳು ನಡಿಯುತ್ತಲೇ ಇದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ‌ ಕ್ರೈಂ ತಡೆಗಟ್ಟಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಲ್ಲ ಸಿಬ್ಬಂದಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಇವತ್ತು ಕಮಿಷನರ್ ನಗರದ ಎಲ್ಲ ಹಿರಿಯ ಅಧಿಕಾರಿಗಳಾದ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಸಿಟಿ ಪೊಲೀಸ್ ಹೆಚ್ಚುವರಿ ಆಯುಕ್ತರು, ಡಿಸಿಪಿಗಳು, ಎಸಿಪಿಗಳು, ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್ , ಕಾನ್ಸ್​​​​ಟಬಲ್​​​​ಗಳಿಗೆ ಬುಲಾವ್ ನೀಡಿ ಆಡುಗೋಡಿ ಮೈದಾನದಲ್ಲಿ ಕ್ರೈಂ ಹೇಗೆ ತಡೆಗಟ್ಟುವುದು ಅನ್ನುವುದರ ಕುರಿತು ಸೂಚನೆ ನೀಡಿದರು.

ದೇವರ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡುವಂತೆ ಸೂಚನೆ..

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಮಿಷನರ್ ಕ್ರೈಂಗಳನ್ನು ತಡೆಗಟ್ಟಲು ಹರಸಾಹಸ ಪಡುತ್ತಿದ್ದಾರೆ. ಸಿಬ್ಬಂದಿ ಜೊತೆ ಸೇರಿಕೊಂಡು ಕ್ರೈಂ ತಡೆಗಟ್ಟಲು‌‌ ಕಟ್ಟುನಿಟ್ಟಿನ ಆದೇಶ ನೀಡಲು ಮುಂದಾಗಿದ್ದಾರೆ. ಇದೇ ವಿಷಯವಾಗಿ ಸಿಬ್ಬಂದಿ ಕರೆದು ಸಭೆ ನಡೆಸಿ ಸೂಚನೆಗಳನ್ನ ರವಾನಿಸಿದ್ದಾರೆ. ಯಾರ ಒತ್ತಡಕ್ಕೂ ಮಣಿಯಬಾರದು ಎಂದು ದೇವರ ಹೆಸರಿನಲ್ಲಿ‌ ಪ್ರಮಾಣ ವಚನ ಸ್ವೀಕಾರಿಸುವಂತೆಯೂ ಖಡಕ್​ ಸೂಚನೆ ನೀಡಿದ್ದಾರೆ.

ದಕ್ಷಿಣ ವಿಭಾಗದಲ್ಲಿ ಕಳೆದ ಎರಡು ದಿವಸದಲ್ಲಿ ಮೂರು ಕೊಲೆಗಳು ‌ನಡೆದಿದ್ದು, ದಕ್ಷಿಣ ವಿಭಾಗ ಪೊಲೀಸರು ಖಡಕ್ ಆಗಿ ನೈಟ್ ಬೀಟ್ ಗಸ್ತು ತಿರುಗಿ ರೌಡಿಗಳು, ಪುಡಿ ರೌಡಿಗಳ ಮಟ್ಟ ಹಾಕುವಂತೆಯೂ ನಿರ್ದೇಶನ ನೀಡಿದ್ದಾರೆ.

ABOUT THE AUTHOR

...view details