ಬೆಂಗಳೂರು: ಕಾರೊಂದು ಬೈಕ್ ಸವಾರನಿಗೆ ಡಿಕ್ಕಿಯಾದ ಭಯಾನಕ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವೇಗದ ಕಾರು ಚಾಲನೆ: ಬೈಕ್ಗೆ ಡಿಕ್ಕಿ ಹೊಡೆದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಜನ್ಮದಿನದ ಸಂಭ್ರಮ ಮುಗಿಸಿಕೊಂಡು ಮದ್ಯಪಾನ ಮಾಡಿ ಅತೀ ವೇಗವಾಗಿ ಕಾರ್ನಲ್ಲಿ ಬರುತ್ತಿದ್ದವರು ಎದುರಿಗೆ ಬರುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ಬೈಕ್ಗೆ ಡಿಕ್ಕಿ ಹೊಡೆದ ದೃಶ್ಯ ಭಯಾನಕ
ಕಾರ್ನಲ್ಲಿದ್ದವರು ಜನ್ಮದಿನದ ಸಂಭ್ರಮ ಮುಗಿಸಿಕೊಂಡು ಮದ್ಯಪಾನ ಮಾಡಿ ಕಾರ್ನಲ್ಲಿ ಅತೀ ವೇಗವಾಗಿ ಬರುತ್ತಿದ್ದರು ಎನ್ನಲಾಗಿದೆ. ಇದೇ ವೆಳೆಗೆ ರಾಯಲ್ ಎನ್ಫೀಲ್ಡ್ನಲ್ಲಿ ಬರುತ್ತಿದ್ದ ವ್ಯಕ್ತಿಗೆ ಈ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಅಕ್ಷಯ್ ಎಂಬುವರಿಗೆ ತೀವ್ರ ಗಾಯವಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Dec 4, 2020, 3:35 PM IST