ಬೆಂಗಳೂರು:ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ನಾಪತ್ತೆ ಹಿನ್ನೆಲೆಯಲ್ಲಿ ಕಾಫಿ ಡೇ ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರ್ಸ್ ಇಂದು ತುರ್ತುಸಭೆ ನಡೆಸಿದ್ದಾರೆ. ಸಿದ್ದಾರ್ಥ್ ಪತ್ರದಲ್ಲಿ ತಿಳಿಸಿರೋ ಮಾಹಿತಿ ವಿಚಾರ, ಸಂಸ್ಥೆಯ ಭವಿಷ್ಯದ ಬಗ್ಗೆ ಕಾಫಿ ಡೇ ಡೈರೆಕ್ಟರ್ಸ್ ವಿವರವಾಗಿ ದಿ ಸ್ಕ್ವೇರ್ ಕಾಫಿ ಡೇ ನಲ್ಲಿ ಚರ್ಚಿಸಿದ್ದಾರೆ.
ದಿ ಸ್ಕ್ವೇರ್ ಕಾಫಿ ಡೇನಲ್ಲಿ ನಿರ್ದೇಶಕರ ದಿಢೀರ್ ಸಭೆ - ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್
ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ನಾಪತ್ತೆ ಹಿನ್ನಲೆ ಕಾಫಿ ಡೇ ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರ್ಸ್ ಇಂದು ದಿ ಸ್ಕ್ವೇರ್ ಕಾಫಿ ಡೇ ನಲ್ಲಿ ತುರ್ತುಸಭೆ ನಡೆಸಿದ್ದಾರೆ.
ಸಭೆಯ ಬಳಿಕ ಕಾಫಿ ಡೇ 6 ಜನ ನಿರ್ದೇಶಕರು ಒಬ್ಬೊಬ್ಬರಾಗಿ ತೆರಳಿದರು. ಕಾಫಿ ಡೇ ನಿರ್ದೇಶಕರ ಪೈಕಿ ಎಸ್.ವಿ ರಂಗನಾಥ್ ಕೂಡ ಒಬ್ಬರು. ಎಸ್. ವಿ ರಂಗನಾಥ್ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ. ನಿರ್ದೇಶಕರ ಸಭೆಗೆ ಖಾಸಗಿ ವಾಹನದಲ್ಲಿ ಆಗಮಿಸಿದ್ದ ಎಸ್.ವಿ ರಂಗನಾಥ್ ಸಭೆಯ ಬಳಿಕ ಹಿಂಬಾಗಿಲಿನಿಂದ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರ ಹೋದರು.
ಸಿದ್ದಾರ್ಥ್ ಕಣ್ಮರೆಯಾಗಿರುವ ಬಗ್ಗೆ ಸಂಸ್ಥೆಯ ಉದ್ಯೋಗಿಗಳು ಮಾಧ್ಯಮಗಳ ಜೊತೆ ಮಾತನಾಡಿ, ಸಿದ್ದಾರ್ಥ್ ಅವ್ರು ಎಲ್ಲರ ಜೊತೆ ಚೆನ್ನಾಗಿದ್ರು. ಸಂಭಳ ನೀಡುವಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಭಾವುಕರಾದ್ರು.