ಕರ್ನಾಟಕ

karnataka

ETV Bharat / state

ಮತ್ತಷ್ಟು ಯೋಜನೆಗಳ ತನಿಖೆ: ಎಲಿವೇಟೆಡ್ ಕಾರಿಡಾರ್ ಯೋಜನೆ ಟೆಂಡರ್ ರದ್ದು; ಎಲ್ಲರಿಗೂ ಸೂರು ಯೋಜನೆ ತನಿಖೆಗೆ!

ಸಿಎಂ ಯಡಿಯೂರಪ್ಪ ಈ ಹಿಂದಿನ ಸರ್ಕಾರದ ಮತ್ತಷ್ಟು ಯೋಜನೆಗಳಿಗೆ ಬ್ರೇಕ್ ನೀಡಿ, ತನಿಖೆಗೆ ಆದೇಶ ಹೊರಡಿಸಿದ್ದಾರೆ.

ಸಿಎಂ ಯಡಿಯೂರಪ್ಪ

By

Published : Sep 16, 2019, 6:05 PM IST

ಬೆಂಗಳೂರು: ಹಿಂದಿನ ಸರ್ಕಾರದ ಮತ್ತಷ್ಟು ಯೋಜನೆಗಳಿಗೆ ಬ್ರೇಕ್ ನೀಡಿರುವ ಸಿಎಂ ಯಡಿಯೂರಪ್ಪ ತನಿಖೆಗೆ ಆದೇಶ ಹೊರಡಿಸಿದ್ದಾರೆ.

ಇದೀಗ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಪರಿಹರಿಸಲು ಮೈತ್ರಿ ಸರ್ಕಾರ ಜಾರಿಗೆ ತಂದಿದ್ದ ಎಲಿವೇಟೇಡ್ ಕಾರಿಡಾರ್ ಯೋಜನೆಗೆ ತಡೆ ನೀಡಿದೆ.

ಮತ್ತಷ್ಟು ಯೋಜನೆಗಳ ತನಿಖೆ: ಎಲಿವೇಟೆಡ್ ಕಾರಿಡಾರ್ ಯೋಜನೆ ಟೆಂಡರ್ ರದ್ದು; ಎಲ್ಲರಿಗೂ ಸೂರು ಯೋಜನೆ ತನಿಖೆಗೆ!

ಲೋಕೋಪಯೋಗಿ ಇಲಾಖೆಯ ಕೆಆರ್​ಡಿಸಿಎಲ್ ಸಂಸ್ಥೆ ಎಲಿವೇಟೆಡ್ ಕಾರಿಡಾರ್ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು‌. ಬಿಬಿಎಂಪಿ ವ್ಯಾಪ್ತಿಯ 07 ಜಂಕ್ಷನ್​ಗಳನ್ನು ಸಂಪರ್ಕಿಸುವ 21.54 ಕಿಮೀ ಉದ್ದದ, ₹6,855 ಕೋಟಿ ಅಂದಾಜು ಮೊತ್ತದ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಎಲಿವೇಟೆಡ್ ಕಾರಿಡಾರ್ ರಸ್ತೆ ಯೋಜನೆಯ ಒಂದನೇ ಹಂತದ 03 ಪ್ಯಾಕೇಜ್​ಗಳ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ, ವಾಸ್ತವ ಅಂದಾಜು ಮೊತ್ತದ ಕ್ರಿಯಾ ಯೋಜನೆಯನ್ನು ಹೊಸದಾಗಿ ತಯಾರಿಸುವಂತೆ ಆದೇಶ ನೀಡಿದ್ದಾರೆ.

ಎಲ್ಲರಿಗೂ ಸೂರು ಯೋಜನೆ ತನಿಖೆಗೆ:

ಮತ್ತಷ್ಟು ಯೋಜನೆಗಳ ತನಿಖೆ: ಎಲಿವೇಟೆಡ್ ಕಾರಿಡಾರ್ ಯೋಜನೆ ಟೆಂಡರ್ ರದ್ದು; ಎಲ್ಲರಿಗೂ ಸೂರು ಯೋಜನೆ ತನಿಖೆಗೆ!
2017-18ರ ಸಾಲಿನಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮೈತ್ರಿ ಸರ್ಕಾರ ಎಲ್ಲರಿಗೂ ಸೂರು ಎಂಬ ಕಾರ್ಯಕ್ರಮದ ಅನ್ವಯ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ 49,368 ಮನೆಗಳನ್ನು ಒಟ್ಟು ₹ 2,662 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು.

2017-18ನೇ ಸಾಲಿನಲ್ಲಿ 49,368 ಮನೆಗಳನ್ನು ‌ನಿರ್ಮಿಸುವ ಉದ್ದೇಶದಿಂದ, ₹ 2,662 ಕೋಟಿ ಪ್ರಕ್ರಿಯೆಯ ಟೆಂಡರ್​ಗೆ ಚಾಲನೆ ನೀಡಲಾಗಿತ್ತು. ಇದೀಗ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ದೂರುಗಳು ಬಂದಿತ್ತು. ಈ ಪ್ರಕರಣದ ತನಿಖೆ ನಡೆಸಿ ಎರಡು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಸಿಎಂ ಆದೇಶ ನೀಡಿದ್ದಾರೆ.

ಅಂಡರ್ ಗ್ರೌಂಡ್ ಡಸ್ಟ್ ಬಿನ್ ಅಳವಡಿಕೆ ತನಿಖೆ:

ಮತ್ತಷ್ಟು ಯೋಜನೆಗಳ ತನಿಖೆ: ಎಲಿವೇಟೆಡ್ ಕಾರಿಡಾರ್ ಯೋಜನೆ ಟೆಂಡರ್ ರದ್ದು; ಎಲ್ಲರಿಗೂ ಸೂರು ಯೋಜನೆ ತನಿಖೆಗೆ!

ಬಿಬಿಎಂಪಿ ವ್ಯಾಪ್ತಿಯ ಆಯ್ದ 200 ಪ್ರಮುಖ ಸ್ಥಳಗಳಲ್ಲಿ 500 ಟನ್​ಗಳಷ್ಟು ತ್ಯಾಜ್ಯ ಸಂಗ್ರಹ ಮಾಡುವ ಉದ್ದೇಶದಿಂದ ಕೈಗೊಳ್ಳಲಾಗಿರುವ ಅಂಡರ್ ಗ್ರೌಡ್ ಡಸ್ಟ್ ಬಿನ್ ಅಳವಡಿಕೆ, ಇವುಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಸಂಗ್ರಹ ಮಾಡಲು ಕ್ರೇನ್​ಗಳನ್ನು ಒಳಗೊಂಡ 8 ಟ್ರಕ್​ಗಳು, ಇವುಗಳ 60 ತಿಂಗಳ ನಿರ್ವಹಣೆ ಮತ್ತು ಪರಿಚಾರಕರ ಸೇವೆ, ಇವುಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಸಂಸ್ಕರಣಾ ಘಟಕಗಳಿಗೆ ಸಾಗಿಸುವ ಕಾರ್ಯ ಸಂಬಂಧ ನೀಡಿದ ಗುತ್ತಿಗೆಯಲ್ಲಿನ ಅವ್ಯವಹಾರ ಆರೋಪದ ಬಗ್ಗೆ ತನಿಖೆ ನಡೆಸಲು ಸಿಎಂ ಆದೇಶ ಹೊರಡಿಸಿದ್ದಾರೆ.

ಒಟ್ಟು ₹ 55,27,53,332 ಮೊತ್ತದ ಗುತ್ತಿಗೆಯನ್ನು ಸೋಂಟಾ ಇನ್ಫ್ರಾಟೆಕ್ ಸಂಸ್ಥೆಗೆ ಕಾರ್ಯಾದೇಶ ಪತ್ರವನ್ನು ನೀಡಲಾಗಿದ್ದು, ಇದರಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರಗಳು ನಡೆದಿವೆ ಮತ್ತು ಕಾರ್ಯಾದೇಶ ಪತ್ರದಲ್ಲಿರುವಂತೆ ಅಂಡರ್ ಗ್ರೌಂಡ್ ಅಳವಡಿಸಿಲ್ಲ ಎಂಬ ಬಗ್ಗೆ ದೂರುಗಳು ಬಂದಿತ್ತು.

ಈ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನಾ ವರದಿ ಮತ್ತು ತನಿಖಾ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

ABOUT THE AUTHOR

...view details