ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ ಎಂದು ಸಿಎಂ ಬಿಎಸ್ವೈ ಸರ್ಕಾರದ ಕಾರ್ಯ ವೈಖರಿಯನ್ನ ಸಮರ್ಥಿಸಿಕೊಂಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ: ಸಿಎಂ ಸಮರ್ಥನೆ - ಕೊರೊನಾ ನಿಯಂತ್ರಣ
ಯಾರೋ ಒಬ್ಬರು ತೀರಿಕೊಂಡಿದ್ದಕ್ಕೂ, ಬೆಡ್ ಸಿಗದಿರೋದಕ್ಕೂ ಸಂಬಂಧ ಕಲ್ಪಿಸಬೇಡಿ. ನಾವು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ
ಸಿಎಂ
ವಿಧಾನಸೌಧದಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಸಹಕರಿಸಲು ಒಪ್ಪಿಕೊಂಡಿವೆ. ನಿನ್ನೆ ಖಾಸಗಿ ಆಸ್ಪತ್ರೆಗಳ ಜೊತೆ ಮಾತುಕತೆ ನಡೆಸಿದ್ದೇವೆ. ನಿನ್ನೆ 2,500 ಬೆಡ್ ಕೊಡಲು ಒಪ್ಪಿಕೊಂಡಿವೆ. ಇವತ್ತು 750 ಬೆಡ್ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಯಾರೋ ಒಬ್ಬರು ತೀರಿಕೊಂಡಿದ್ದಕ್ಕೂ, ಬೆಡ್ ಸಿಗದಿರೋದಕ್ಕೂ ಸಂಬಂಧ ಕಲ್ಪಿಸಬೇಡಿ. ನಾವು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ದೇಶದಲ್ಲೇ ಅತ್ಯಂತ ಬಿಗಿ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಖಾಸಗಿ ಆಸ್ಪತ್ರೆಗಳನ್ನು ಏಕೆ ದೂರುತ್ತೀರಾ ಎಂದು ಪ್ರಶ್ನಿಸಿದರು.