ಕರ್ನಾಟಕ

karnataka

ETV Bharat / state

Siddaramaiah : ಶಕ್ತಿ ಯೋಜನೆಗೆ ಚಾಲನೆ ನೀಡಲು ಬಿಎಂಟಿಸಿ ಕಂಡಕ್ಟರ್ ಆಗಲಿರುವ ಸಿಎಂ ಸಿದ್ದರಾಮಯ್ಯ! - ಈಟಿವಿ ಭಾರತ ಕನ್ನಡ

ಶಕ್ತಿ ಯೋಜನೆಗೆ ಸಿಎಂ ನಾಳೆ ಚಾಲನೆ ನೀಡಲಿದ್ದು, ಬಿಎಂಟಿಸಿ ಕಂಡಕ್ಟರ್ ಆಗಿ ಮಹಿಳಾ ಪ್ರಯಾಣಿಕರಿಗೆ ಟಿಕೆಟ್​ ನೀಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By

Published : Jun 9, 2023, 11:46 AM IST

Updated : Jun 9, 2023, 11:53 AM IST

ಬೆಂಗಳೂರು: ಅಧಿಕಾರ ಗದ್ದುಗೆ ತಂದು ಕೊಟ್ಟ ಗ್ಯಾರಂಟಿಗಳ ಜಾರಿಗೆ ಕಾಂಗ್ರೆಸ್ ಸರ್ಕಾರ ವಿಭಿನ್ನ ರೀತಿಯಲ್ಲಿ ಚಾಲನೆ ನೀಡಲು ಮುಂದಾಗಿದೆ. ಜೂನ್ 11ರಂದು ಬಹುನಿರೀಕ್ಷಿತ ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಸ್ವತಃ ಕಂಡಕ್ಟರ್ ಆಗಲಿದ್ದಾರೆ.

ಶಕ್ತಿ ಯೋಜನೆಗೆ ವಿಶೇಷ ರೂಪದಲ್ಲಿ ಚಾಲನೆ ಕೊಡಲು ಮುಂದಾದ ಸಿಎಂ ಸಿದ್ದರಾಮಯ್ಯ, ಭಾನುವಾರ ಬಿಎಂಟಿಸಿ ಕಂಡಕ್ಟರ್ ಆಗಿ ಮಹಿಳಾ ಪ್ರಯಾಣಿಕರಿಗೆ ಸಾಂಕೇತಿಕವಾಗಿ ಉಚಿತ ಬಸ್ ಟಿಕೆಟ್ ನೀಡಲಿದ್ದಾರೆ. ಆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗೆ ವಿಶಿಷ್ಟ ರೀತಿಯಲ್ಲಿ ಚಾಲನೆ ಕೊಡಲಿದ್ದಾರೆ. ತಾವೇ ಬಸ್ ಕಂಡಕ್ಟರ್ ಆಗಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ. ಜೂನ್ 11 ರಂದು ಮೆಜೆಸ್ಟಿಕ್ ನಿಂದ ವಿಧಾನಸೌಧ ಮಾರ್ಗದ ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್ ಆಗಿ ಟಿಕೆಟ್ ನೀಡಲಿದ್ದಾರೆ. ರೂಟ್ ನಂ.43 ಬಸ್‌ನಲ್ಲಿ ಕಂಡಕ್ಟರ್ ರೀತಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ.

ನಂತರ ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಅದೇ ದಿನ ಜಿಲ್ಲೆಗಳಲ್ಲಿ ಸಚಿವರಿಂದ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ಸಿಗಲಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ವಿಶಿಷ್ಟವಾಗಿ ಚಾಲನೆ ನೀಡಿ, ರಾಜ್ಯದ ಜನರ ಗಮನ ಸೆಳೆಯಲು ಮುಂದಾಗಿದೆ.

ಜೂನ್ 11 ರಿಂದ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ರಸ್ತೆ ಸಾರಿಗೆ ಬಸ್, ಬಿಎಂಟಿಸಿ ಬಸ್​ಗಳಲ್ಲಿ ಉಚಿತ ಪ್ರಯಾಣ ಆರಂಭವಾಗಲಿದೆ. ಈ ಸಂಬಂಧ ರಸ್ತೆ ಸಾರಿಗೆ ಸಂಸ್ಥೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಭಾವಚಿತ್ರ ಹೊಂದಿರುವ ಅಧಿಕೃತ ಐಡಿ ಕಾರ್ಡ್​ಗಳನ್ನು ತೋರಿಸುವ ಮೂಲಕ ರಾಜ್ಯದ ಮಹಿಳೆಯರು ರಸ್ತೆ ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳಸಬಹುದು.

2023 ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ರಾಜ್ಯದ ಜನರಿಗೆ ಐದು ಉಚಿತ ಗ್ಯಾರಂಟಿಗಳನ್ನು ನೀಡಿತ್ತು. ತಾನು ಅಧಿಕಾರಕ್ಕೆ ಬಂದರೆ 24 ಗಂಟೆಗಳ ಒಳಗೆ ಆ ಎಲ್ಲ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಘೋಷಿಸಿತ್ತು. ಅದರ ಅನ್ವಯ ಸರ್ಕಾರ ರಚನೆ ಆದ ಬಳಿಕ ನಡೆದ ಮೊದಲ ಸಚಿವ ಸಂಪುಟದಲ್ಲಿ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿತ್ತು.

ಆ ಬಳಿಕ ನಡೆದ ಎರಡನೇ ಸಚಿವ ಸಂಪುಟ ಸಭೆ ಬಳಿಕ ಎಲ್ಲ ಐದು ಗ್ಯಾರಂಟಿಗಳ ಬಗ್ಗೆ ಅಧಿಕೃತ ಸುದ್ದಿಗೋಷ್ಠಿ ನಡೆಸಿ, ಯೋಜನೆಗಳ ಜಾರಿ ದಿನಾಂಕಗಳನ್ನು ಘೋಷಣೆ ಮಾಡಿತ್ತು. ಸುದ್ದಿಗೋಷ್ಠಿಯಲ್ಲಿ ಹೇಳಿದ ಹಾಗೆ ಜೂನ್​ 11 ರಂದು ಶಕ್ತಿ ಯೋಜನೆಯನ್ನು ಜಾರಿಗೆ ತರಲಿದ್ದು, ಅವತ್ತು ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆ ಸ್ವತಃ ತಾವೇ ಕಂಡಕ್ಟರ್​ ಆಗಿ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ:Lok Sabha Elections 2024 : ಜೂನ್ 11 ರಂದು ಸಿಎಂ ಮತ್ತು ಡಿಸಿಎಂಗಳ ಸಭೆ ಕರೆದ ಬಿಜೆಪಿ

Last Updated : Jun 9, 2023, 11:53 AM IST

ABOUT THE AUTHOR

...view details