ಕರ್ನಾಟಕ

karnataka

ETV Bharat / state

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ: ಸಮಸ್ಯೆ ಬಗೆಹರಿಸುವುದಾಗಿ ಭರವಸೆ - ಸಾರ್ವಜನಿಕ ಅಹವಾಲು

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ. ಸಮಸ್ಯೆ ಬಗೆಹರಿಸುವುದಾಗಿ ಅಭಯ.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿಎಂ; ಸಮಸ್ಯೆ ಬಗೆಹರಿಸುವುದಾಗಿ ಭರವಸೆ

By

Published : Sep 15, 2019, 1:39 PM IST

ಬೆಂಗಳೂರು:ಇಂದು ಭಾನುವಾರವಾದ ಕಾರಣ ಬೇರೆ ಬೇರೆ ಕಡೆಗಳಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನ ಹೊತ್ತುಕೊಂಡು ಡಾಲರ್ಸ್ ಕಾಲೋನಿಯ ಸಿಎಂ ನಿವಾಸದ ಬಳಿ ಬಂದಿದ್ದರು. ಈ ನಡುವೆ ಸಿಎಂ ಬಿ.ಎಸ್. ಯಡಿಯೂರಪ್ಪ ಎಂದಿನಂತೆ ಎದ್ದು ವಾಕಿಂಗ್ ತೆರಳಿದ್ದರೂ ಕೂಡಾ ಮರಳಿ ಬಂದು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.

ವಾಕಿಂಗ್ ಮುಗಿಸಿ ಬಂದ ಸಿಎಂ ಯಡಿಯೂರಪ್ಪ ಮನೆಯ ಬಳಿ ಜಮಾಯಿಸಿದ ಸಾರ್ವಜನಿಕ ಅಹವಾಲು ಸ್ವೀಕರಿಸಿ ಕುಂದುಕೊರತೆಗಳನ್ನು ಆಲಿಸಿದರು. ಅದರಲ್ಲೂ ವಿಶೇಷವಾಗಿ‌ ಮಹಿಳೆಯೊಬ್ಬರು, ಎದೆನೋವಿನಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಹಾಯ ಮಾಡುವಂತೆ ಬೇಡಿಕೊಂಡರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿಎಂ
ಇನ್ನು ಮಹಿಳೆಯ ಸಮಸ್ಯೆ ಆಲಿಸಿದ ಸಿಎಂ, ಆರೋಗ್ಯ ಸುಧಾರಣೆಗೆ ಬೇಕಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಉಳಿದ ಎಲ್ಲರ ಅಹವಾಲುಗಳನ್ನ ಸ್ವೀಕರಿಸಿ ಸಮಸ್ಯೆ ಬಗೆಹರಿಸುವಂತೆ ತಮ್ಮ ಸಿಬ್ಬಂದಿಗೆ ಸಿಎಂ ಸೂಚಿಸಿದರು.

ABOUT THE AUTHOR

...view details