ಬೆಂಗಳೂರು: ಸಿಡಿ ಪ್ರಕರಣ, ಮೀಸಲಾತಿ ಬಿಕ್ಕಟ್ಟು ವಿಚಾರವಾಗಿ ಸಮಾಲೋಚನೆ ನಡೆಸಲು ಸಿಎಂ ಯಡಿಯೂರಪ್ಪ ಸೋಮವಾರ ಸಚಿವರ ಜೊತೆ ಸಭೆ ನಡೆಸಲಿದ್ದಾರೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಸಚಿವರ ಜೊತೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ. ಹಲವು ಪ್ರಮುಖ ವಿಚಾರಗಳ ಬಗ್ಗೆ ಸಚಿವರ ಜೊತೆ ಸಿಎಂ ಸಮಾಲೋಚಿಸಲಿದ್ದಾರೆ. ಸಿಡಿ ಪ್ರಕರಣದ ಪರಿಣಾಮಗಳ ಕುರಿತು ಸಮಾಲೋಚನೆ ಮಾಡಲಿದ್ದಾರೆ. ಸಿಡಿ ವಿಚಾರದಲ್ಲಿ ಕೆಲ ರಾಜಕಾರಣಿಗಳ ನಂಟು, ಪ್ರಕರಣದಿಂದ ಸರ್ಕಾರದ ಮೇಲಾಗಿರುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಮೀಸಲಾತಿ ಸಂಬಂಧ ಪಂಚಮಸಾಲಿ ಸಮುದಾಯದವರ ಹೋರಾಟದ ಬಗ್ಗೆಯೂ ಚರ್ಚೆ ನಡೆಯಲಿದೆ. ಬಸನಗೌಡ ಪಾಟೀಲ್ ಯತ್ನಾಳ್ ಧರಣಿ ನಡೆಸಿದರೆ ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ. ಉಳಿದಂತೆ ಬಜೆಟ್ ಮಂಡನೆಯ ಬಳಿಕದ ಸ್ಥಿತಿಗತಿ, ಬಜೆಟ್ನಲ್ಲಿ ಕೆಲವು ವಲಯಗಳಿಗೆ ಅನುದಾನ ಕಡಿತ, ದಲಿತ ಸಮುದಾಯ, ಹಿಂದುಳಿದ ವರ್ಗಗಳ ಅನುದಾನವೂ ಕಡಿತ, ಅನುದಾನ ಕಡಿತದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತೆ: ಸಚಿವ ಶೆಟ್ಟರ್