ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿ ಕಾರಿನಿಂದಲೇ ರೂಲ್ಸ್​ ಬ್ರೇಕ್​: 4 ತಿಂಗಳಿನಿಂದ ದಂಡ ಬಾಕಿ - ರೇಂಜ್ ರೋವರ್ ಕಾರ್

ಕಾನೂನು ಎಲ್ಲರಿಗೂ ಒಂದೇ. ಸಾಮಾನ್ಯ ಜನರಿಂದ ಹಿಡಿದು ವಿಐಪಿಗಳಿಗೂ ಅದು ಒಂದೇ ಆಗಿರಬೇಕು. ಆದರೆ ಇಲ್ಲಿ ಅದು ಯಾಕೋ ನಿಯಮ ಪಾಲನೆಯಾಗಿಲ್ಲ ಅನ್ನಿಸ್ತಿದೆ. ಯಾಕಂತೀರಾ... ಇಲ್ಲಿ ನಿಯಮ ಪಾಲನೆ ಮಾಡದೇ ಇರೋದು ಸಿಎಂ ಅವರ ಸ್ವಂತ ಕಾರು.

ರೇಂಜ್ ರೋವರ್ ಕಾರ್

By

Published : Jun 29, 2019, 1:40 PM IST

Updated : Jun 29, 2019, 2:07 PM IST

ಬೆಂಗಳೂರು:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಳಸುವ ಕಾರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ‌ ನಾಲ್ಕು ತಿಂಗಳು ದಂಡ ಕಟ್ಟಿಲ್ಲ ಎಂಬ ವಿಚಾರ ಇದೀಗ ಬಯಲಾಗಿದೆ.

ಸರ್ಕಾರಿ ವಾಹನ ಬಳಸದೇ ಸ್ವಂತ ವಾಹನ ಬಳಸುತ್ತಿರುವ ಸಿಎಂ ಅವರ ರೇಂಜ್ ರೋವರ್ ಕಾರ್ ಮೇಲೆ 4 ತಿಂಗಳಿನಿಂದ ನಿಯಮ ಉಲ್ಲಂಘನೆ ಆರೋಪವಿದೆ.

ಸಿಎಂ ರೇಂಜ್ ರೋವರ್ ಕಾರ್ ವಿವರ

ಕಳೆದ ಫೆ.10 ರಂದು ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆಯಾಗಿತ್ತು. ಕಾರು ಚಾಲಕ ಮೊಬೈಲ್ ಬಳಕೆ ಮಾಡಿದ್ದು ಆಟೋಮೆಟೆಡ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಸಂಚಾರಿ ಪೊಲೀಸರು ನೋಟಿಸ್ ಕಳಿಸಿದ್ದರು.

ಆಟೋಮೇಟೆಡ್ ಚಲನ್ ಜನರೇಟ್ ಆಗಿ ಈಗಲೇ ಎರಡು ವಾರಗಳಾಗಿದೆ. ಸಂಚಾರ ನಿಯಮದ ಪ್ರಕಾರ ಚಲನ್ ಜನರೇಟ್ ಆದ 7 ದಿನಗಳಲ್ಲಿ ದಂಡ ಪಾವತಿಸಬೇಕು. ಇಲ್ಲವಾದಲ್ಲಿ ಪೊಲೀಸರೇ ತಡೆ ಹಿಡಿದು ದಂಡ ವಸೂಲಿ ಮಾಡಬಹುದು. ಆದರೆ ಇನ್ನೂ ದಂಡ ಕಟ್ಟಿಲ್ಲ.‌ ಆದಷ್ಟು ಬೇಗ ದಂಡ ವಸೂಲಿ‌ ಮಾಡುವುದಾಗಿ ಸಂಬಂಧಪಟ್ಟ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Last Updated : Jun 29, 2019, 2:07 PM IST

ABOUT THE AUTHOR

...view details