ಕರ್ನಾಟಕ

karnataka

ETV Bharat / state

ಇಂದು ಸಚಿವ ಸಂಪುಟ ಸಭೆ ಬಳಿಕ ಸಿಎಂ ಮಾಧ್ಯಮಗೋಷ್ಟಿ: ಕುತೂಹಲ ಮೂಡಿಸಿದ ಬಿಎಸ್​​ವೈ ನಡೆ

ವಿಧಾನಸೌಧದಲ್ಲಿ ಬೆಳಗ್ಗೆ 10.30 ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆ ಮುಗಿದ ನಂತರ ಸಮ್ಮೇಳನ ಸಭಾಂಗಣದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಧ್ಯಮಗೋಷ್ಟಿ ನಡೆಸಲಿದ್ದಾರೆ.

cm bs yadiyurappa tomarrow press meet news
ನಾಳೆ ಸಿಎಂ ಸುದ್ದಿಗೋಷ್ಠಿ

By

Published : Nov 26, 2020, 10:28 PM IST

Updated : Nov 27, 2020, 6:54 AM IST

ಬೆಂಗಳೂರು: ಇಂದು ಸಚಿವ ಸಂಪುಟ ಸಭೆ ನಂತರ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಧ್ಯಮಗೋಷ್ಟಿ ನಡೆಸಲಿದ್ದು, ಸಿಎಂ ದಿಢೀರ್ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.

ವಿಧಾನಸೌಧದಲ್ಲಿ ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆ ಮುಗಿದ ನಂತರ ಸಮ್ಮೇಳನ ಸಭಾಂಗಣದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗೋಷ್ಟಿ ನಡೆಸಲಿದ್ದಾರೆ. ಸಾಮಾನ್ಯವಾಗಿ ಸಚಿವ ಸಂಪುಟ ಸಭೆ ನಂತರ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಚಿವ ಸಂಪುಟ ಕೈಗೊಂಡ ನಿರ್ಣಯ, ನಿರ್ಧಾರಗಳ ಮಾಹಿತಿ ನೀಡುತ್ತಿದ್ದರು. ಆದರೆ ಇಂದು ಮಾಧುಸ್ವಾಮಿ ಮಾಧ್ಯಮಗೋಷ್ಟಿ ನಡೆಸುವ ಮೊದಲೇ ಸಿಎಂ ಯಡಿಯೂರಪ್ಪ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ:ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಪೂರ್ವ ಸಿದ್ಧತೆ: ಜನಪ್ರಿಯ 'ಆಯವ್ಯಯ' ಮಂಡನೆಗೆ ಹಣಕಾಸು ಕೊರತೆ..!

ಯಾವ ವಿಷಯಕ್ಕೆ ಸಿಎಂ ಮಾಧ್ಯಮಗೋಷ್ಟಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಗೌಪ್ಯವಾಗಿರಿಸಲಾಗಿದೆ. ಆದರೂ ಹೊಸ ಯೋಜನೆಗಳನ್ನು ಸಿಎಂ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಂಪುಟ ಸರ್ಕಸ್ ನಡುವೆಯೇ ದಿಢೀರ್ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ಮೂಲಕ ಸಂಚಲನ ಮೂಡಿಸಿರುವ ಸಿಎಂ ಯಡಿಯೂರಪ್ಪ, ಇಂದು ಏನು ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನುವ ನಿರೀಕ್ಷೆ ಕೇಸರಿ ಪಾಳಯದಲ್ಲಿ ಮನೆ ಮಾಡಿದೆ.

Last Updated : Nov 27, 2020, 6:54 AM IST

ABOUT THE AUTHOR

...view details