ಕರ್ನಾಟಕ

karnataka

ETV Bharat / state

ಪದಕ‌ ಗೆಲ್ಲದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ಹಾಕಿ ತಂಡ ಗೆದ್ದಿದೆ : ಸಿಎಂ‌ ಶ್ಲಾಘನೆ

ಹಲವಾರು ವರ್ಷಗಳ ಬಳಿಕ ಓಲಂಪಿಕ್ಸ್​ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತಲುಪಿ ಅಮೋಘ ಸಾಧನೆ ಮಾಡಿದೆ. ಒಟ್ಟು ಮೂರು ಜನ ಕೋಚ್​ಗಳ ಪೈಕಿ ಅಂಕಿತಾ ಒಬ್ಬರು. ಕನ್ನಡಿಗರು ಎಂಬುದು ಶ್ಲಾಘನೀಯ ಮತ್ತು ಹೆಮ್ಮೆ ಎಂದು ಅಭಿಪ್ರಾಯಪಟ್ಟರು ಮುಖ್ಯಮಂತ್ರಿಗಳು..

indias-womens-hockey-team-coach-ankita-suresh
ಭಾರತ ಮಹಿಳಾ ಹಾಕಿ ತಂಡ

By

Published : Aug 13, 2021, 10:13 PM IST

ಬೆಂಗಳೂರು :ಟೋಕಿಯೊ ಒಲಂಪಿಕ್ಸ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ‌ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಗೆದ್ದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯ ಮಹಿಳಾ ಹಾಕಿ ತಂಡದ ಕೋಚ್​​ಗೆ ಸಿಎಂ ಸನ್ಮಾನ

ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕೋಚ್ ಕನ್ನಡತಿ ಅಂಕಿತಾರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಅಂಕಿತಾ ಮಡಿಕೇರಿ ಮೂಲದವರು. ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ.

ಹಲವಾರು ವರ್ಷಗಳ ಬಳಿಕ ಓಲಂಪಿಕ್ಸ್​ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತಲುಪಿ ಅಮೋಘ ಸಾಧನೆ ಮಾಡಿದೆ. ಒಟ್ಟು ಮೂರು ಜನ ಕೋಚ್​ಗಳ ಪೈಕಿ ಅಂಕಿತಾ ಒಬ್ಬರು. ಕನ್ನಡಿಗರು ಎಂಬುದು ಶ್ಲಾಘನೀಯ ಮತ್ತು ಹೆಮ್ಮೆ ಎಂದು ಅಭಿಪ್ರಾಯಪಟ್ಟರು ಮುಖ್ಯಮಂತ್ರಿಗಳು.

ABOUT THE AUTHOR

...view details