ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಪೊಲೀಸರು ನಿರ್ಭಯವಾಗಿ ಕೆಲಸ ಮಾಡುತ್ತಿದ್ದು, ಇದ್ರಿಂದ ಕೆಲವರಿಗೆ ಭಯ ಹುಟ್ಟಿದೆ : ಸಿಎಂ ಬೊಮ್ಮಾಯಿ

ನಮ್ಮ ಪೊಲೀಸರು ದಕ್ಷರಾಗಿದ್ದಾರೆ. ಬಹಳ ನಿಷ್ಪಕ್ಷಪಾತವಾಗಿ, ನಿರ್ಭಯವಾಗಿ ಕೆಲಸ ಮಾಡುತ್ತಿದ್ದಾರೆ. ಏನೇ ಹಗರಣ ಇದ್ರೂ ನಿಷ್ಪಕ್ಷಯುತವಾಗಿ ಕೆಲಸ ಮಾಡ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ..

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

By

Published : May 3, 2022, 2:34 PM IST

ಬೆಂಗಳೂರು :ರಾಜ್ಯದ ಪೊಲೀಸರು ನಿರ್ಭಯವಾಗಿ ಕೆಲಸ ಮಾಡುತ್ತಿದ್ದು, ಇದರಿಂದ ಕೆಲವರಿಗೆ ಭಯ ಆಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ನೀಡಿದರು. ನೃಪತುಂಗ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ನೃಪತುಂಗ ವಿಶ್ವವಿದ್ಯಾಲಯದ ಉದ್ಘಾಟನಾ ಹಾಗೂ ಶೈಕ್ಷಣಿಕ ಸಮುಚ್ಚಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿರುವುದು..

ನಮ್ಮ ಪೊಲೀಸರು ದಕ್ಷರಾಗಿದ್ದಾರೆ. ಬಹಳ ನಿಷ್ಪಕ್ಷಪಾತವಾಗಿ, ನಿರ್ಭಯವಾಗಿ ಕೆಲಸ ಮಾಡುತ್ತಿದೆ. ಏನೇ ಹಗರಣ ಇದ್ರೂ ನಿಷ್ಪಕ್ಷಯುತವಾಗಿ ಕೆಲಸ ಮಾಡ್ತಾರೆ. ಇದರಿಂದ ಕೆಲವರಿಗೆ ತೊಂದರೆ ಆಗುತ್ತಿದೆ. ಎಲ್ಲಿ ಅವರ ಬುಡಕ್ಕೆ ಬರುತ್ತೆ ಅಂತಾ ಕೆಲವರಿಗೆ ಭಯ ಆಗ್ತಿದೆ. ಅದಕ್ಕಾಗಿ ಏನೇನೋ ಮಾತನಾಡುತ್ತಿದ್ದಾರೆ. ನಾವು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಪರಾಧಿಗಳ ರಕ್ಷಣೆ ಯಾರೂ ಮಾಡಕೂಡದು ಎಂದು ತಿಳಿಸಿದರು.

ನಿಮ್ಮೆಲ್ಲರನ್ನು ನೋಡಿ ಬಹಳ ಸಂತೋಷ ಆಗಿದೆ.‌ ನಿಮ್ಮೆಲ್ಲರ ನೋಡಿ ಕರ್ನಾಟಕದ ಭವಿಷ್ಯ ಉಜ್ವಲ ಆಗುತ್ತೆ ಅನ್ಸುತ್ತೆ. ನೀವೆಲ್ಲರೂ ಅದೃಷ್ಟವಂತರು. ಬದಲಾವಣೆ ಆಗುವ ಸಂದರ್ಭದಲ್ಲಿ ನೀವು ವಿದ್ಯಾರ್ಥಿಗಳು ಆಗಿದ್ದೀರಿ. ಬದಲಾವಣೆ ಮುಂಚೂಣಿಯಲ್ಲಿ ನೀವು ವಿದ್ಯಾರ್ಥಿಗಳು ಆಗಿದ್ದೀರಿ. ದಕ್ಷ ನಾಯಕತ್ವ ಮೋದಿ ಅವ್ರ ಕಾಲದಲ್ಲಿ ನೀವು ವಿದ್ಯಾರ್ಥಿಗಳು ಆಗಿದ್ದೀರಾ..

ನಮ್ಮ ಕಾಲದಲ್ಲಿ ಸರಿಯಾದ ನಾಯಕತ್ವ ಇರಲಿಲ್ಲ. ದೇಶದ ಜನಸಂಖ್ಯೆ ಭಾರ ಅಂತಾ ಹೇಳಿದ್ರೋ ಅದನ್ನ ನಮ್ಮ ದೇಶದ ಆಸ್ತಿ ಅಂತಾ ತೋರಿಸಿದ್ದು ಮೋದಿ-ಅಮಿತ್ ಶಾ. ಭವ್ಯ ಭಾರತ ಕಟ್ಟುವ ಸಂಕಲ್ಪ ಮೋದಿ-ಅಮಿತ್ ಶಾ ಮಾಡಿದ್ದಾರೆ. ದೇಶದ ಮೊದಲ ರಾಜ್ಯವಾಗಿ NEP ಜಾರಿ ಮಾಡಿದ್ದೇವೆ. ಕೆಜಿಯಿಂದ ಹಿಡಿದು ಪಿಜಿವರೆಗೂ ದೊಡ್ಡ ಬದಲಾವಣೆ ಬರಲಿದೆ‌ ಎಂದು ತಿಳಿಸಿದರು.

ಬದಲಾವಣೆ ಬರೋವಾಗ ಸಣ್ಣ ಪುಟ್ಟ ವಿರೋಧ ಇರುತ್ತೆ. ಆದ್ರೆ ಕಾಲ ಯಾವತ್ತು ನಿಲ್ಲೋದಿಲ್ಲ. ಯುವ ಶಕ್ತಿ ಬದಲಾವಣೆ ಸಿದ್ದ ಅನ್ನೋ ಸಂದೇಶ ಕೊಟ್ಟಿದ್ದೀರಾ. ಇದು ಹೆಮ್ಮೆಯ ವಿಚಾರ. ನಮ್ಮ ಕಾಲದಲ್ಲಿ ಸ್ಪಷ್ಟ ನಾಯಕತ್ವ ಇರಲಿಲ್ಲ. ಭವಿಷ್ಯದ ಭಾರತ ಕಟ್ಟುವ ಮೂಲಕ ನಿಮ್ಮೆಲ್ಲರನ್ನು ಸೇನಾನಿಗಳಾಗಿ ಮಾಡಿದ್ದಾರೆ. ಹೊಸ ಶಿಕ್ಷಣ ನೀತಿ ಒಪ್ಪಿಕೊಂಡಿದೆ.

ಅದು ನೃಪತುಂಗ ವಿಶ್ವವಿದ್ಯಾಲಯ ಎಂಬುದು ಹೆಮ್ಮೆಯ ವಿಚಾರ. ಬದಲಾವಣೆ ಮೊದಲನೇ ಸಂಸ್ಥೆ ನೃಪತುಂಗ ವಿಶ್ವವಿದ್ಯಾಲಯ. ಬದಲಾವಣೆಯ ದೊಡ್ಡ ಹರಿಕಾರರು ನೃಪತುಂಗ. ಹೀಗಾಗಿ, ಅದೇ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಆಗಿದೆ. ಬದಲಾವಣೆಯ ಹರಿಕಾರರು ನೀವು ‌ಕೂಡ ಆಗಬೇಕು ಎಂದು ಕರೆ ನೀಡಿದರು.

ಓದಿ:ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್​ನಿಂದ 'ಅಮಿತ್ ಶಾ ಗೋ ಬ್ಯಾಕ್' ಪ್ರತಿಭಟನೆ

For All Latest Updates

TAGGED:

ABOUT THE AUTHOR

...view details