ಬೆಂಗಳೂರು: ನನಗೆ 103 ವರ್ಷ. ಆರು ಮಂದಿ ಮಕ್ಕಳು, 12 ಮಂದಿ ಮೊಮ್ಮಕ್ಕಳು, 16 ಮಂದಿ ಮರಿಮೊಮ್ಮಕ್ಕಳು ಇದ್ದಾರೆ. ತೊಗಲುಗೊಂಬೆ ಆಟ ಆಡಿಸುವ ಕಸುಬನ್ನು ಇಂದಿಗೂ ಮಾಡುತ್ತೇವೆ. ಗೊಂಬೆಯಾಟವನ್ನು ಮಕ್ಕಳಿಗೂ, ಮೊಮ್ಮಕ್ಕಳಿಗೂ ಕಲಿಸಿದ್ದೇನೆ ಎನ್ನುತ್ತಾರೆ ಕೊಪ್ಪಳದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ.
ಈಟಿವಿ ಭಾರತದ ಜೊತೆ ಮಾತನಾಡಿರುವ ಅವರು, ಹಿಂದೆ ಬಯಲಾಟ, ಸಿನಿಮಾ, ನಾಟಕ, ಬಯಲಾಟಗಳು ಯಾವುದೂ ಇರಲಿಲ್ಲ. ಕೇವಲ ತೊಗಲುಗೊಂಬೆಯಾಟ, ಕಿನ್ನರಜೋಗಪ್ಪ ಆಟಗಳು ಪರಂಪರೆಯಾಗಿ ಬಂದವು. ನನ್ನ ಕುಟುಂಬ ಈಗಲೂ ಗೊಂಬೆಯಾಟ ಆಡುತ್ತಾ ಬರುತ್ತಿದೆ ಎನ್ನುತ್ತಾ ಗೊಂಬೆಯಾಟದ ಪದವೊಂದನ್ನು ಹಾಡಿ ಲವಲವಿಕೆಯಿಂದ ಮಾತಾಡಿದರು ಭೀಮವ್ವ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಹಿರಿಯ ನಾಗರಿಕ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಭೀಮವ್ವ ಅವರನ್ನು ಸನ್ಮಾನಿಸಲಾಯಿತು. ಭೀಮವ್ವ ಅವರಿಗೆ 103 ವರ್ಷವಾಗಿದ್ದರೂ ಮುಂಜಾನೆ 4 ಗಂಟೆಗೆ ತನ್ನ ದಿನಚರಿ ಆರಂಭಿಸುತ್ತಾರೆ. ಯಾವ ಖಾಯಿಲೆಯೂ ಇಲ್ಲದೆ ಆರೋಗ್ಯವಾಗಿದ್ದಾರೆ. ಸಾಮಾನ್ಯ ಬಿಪಿ, ಶುಗರ್ ಕೂಡಾ ಇಲ್ಲದೆ ಆರೋಗ್ಯಕರ ಜೀವನ ನಡೆಸುತ್ತಿರುವುದು ವಿಶೇಷ.
ದೇಶ ವಿದೇಶದಲ್ಲೂ ಕಲಾಸೇವೆ: