ಬೆಂಗಳೂರು: ಕಳೆದ ಕೆಲದಿನಗಳಿಂದ ಕೊರೊನಾ ಮುಂಜಾಗ್ರತಾ ಕ್ರಮಗಳ ಸಂಬಂಧ ಸರಣಿ ಸಭೆ, ವೀಡಿಯೋ ಕಾನ್ಫರೆನ್ಸ್ ಎಂದು ಬಿಡುವಿಲ್ಲದ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಕಾವೇರಿಯಲ್ಲಿ ಮುಖ್ಯಮಂತ್ರಿಗಳ ಮಾರ್ಜಾಲ ಪ್ರೇಮ...! - ಬೆಕ್ಕಿನ ಮರಿ
ಸಿಎಂ ಯಡಿಯೂರಪ್ಪ ವಾಯು ವಿಹಾರದ ವೇಳೆ ಆಹಾರಕ್ಕಾಗಿ ಅಲೆದಾಡುತ್ತಿದ್ದ ಸಾಕು ಬೆಕ್ಕಿನ ಮರಿಗೆ ಹಾಲು ಹಾಕಿ ಬೆಕ್ಕಿನ ಮರಿ ಹಾಲು ಕುಡಿದು ಹೋಗುವವರೆಗೂ ಅದರ ಮುಂದೆಯೇ ನಿಂತು ವೀಕ್ಷಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ
ಅಧಿಕೃತ ನಿವಾಸ ಕಾವೇರಿಯಲ್ಲಿ ವಾಸ್ತವ್ಯ ಹೂಡಿರುವ ಸಿಎಂ ಇಂದು ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಯಾವುದೇ ಸಭೆ ನಡೆಸದೇ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ಪ್ರತಿ ದಿನ ವಾಯುವಿಹಾರ ತಪ್ಪಿಸದ ಸಿಎಂ ಇಂದು ಕೂಡ ಕಾವೇರಿ ನಿವಾಸದ ಆವರಣದಲ್ಲಿ ವಾಕಿಂಗ್ ಮಾಡಿ ಮುಗಿಸಿದರು. ವಾಯು ವಿಹಾರದ ವೇಳೆ ಆಹಾರಕ್ಕಾಗಿ ಅಲೆದಾಡುತ್ತಿದ್ದ ಸಾಕು ಬೆಕ್ಕಿನ ಮರಿಗೆ ಹಾಲು ಹಾಕಿದರು, ಬೆಕ್ಕಿನ ಮರಿ ಹಾಲು ಕುಡಿದು ಹೋಗುವವರೆಗೂ ಅದರ ಮುಂದೆಯೇ ನಿಂತು ವೀಕ್ಷಿಸಿದರು.