ಬೆಂಗಳೂರು: ಹೈಕೋರ್ಟ್ ಆದೇಶದಂತೆ ಅಕ್ರಮವಾಗಿ ನಿರ್ಮಾಣವಾಗಿರುವ ದೇವಸ್ಥಾನಗಳನ್ನು ತೆರವು ಮಾಡುವುದರ ಜೊತೆಗೆ ಚಿತ್ರನಟರು ಹಾಗೂ ಸಮಾಜಸುಧಾರಕರ 21 ಪ್ರತಿಮೆಗಳ ತೆರವಿಗೂ ಬಿಬಿಎಂಪಿ ಪಟ್ಟಿ ಮಾಡಿದೆ.
ರಾಜ್ಕುಮಾರ್, ವಿಷ್ಣುವರ್ಧನ್ ಪುತ್ಥಳಿ ಸೇರಿದಂತೆ ಅಕ್ರಮ ಪ್ರತಿಮೆಗಳ ತೆರವು: ಬಿಬಿಎಂಪಿಯಿಂದ ಪಟ್ಟಿ ರಿಲೀಸ್ - ಬೆಂಗಳೂರು ಪ್ರತಿಮೆಗಳ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ
ರಾಜಧಾನಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಸಮಾಜ ಸುಧಾರಕರು, ರಾಜಕೀಯ ನಾಯಕರು ಹಾಗೂ ಚಿತ್ರನಟರ ಮೂರ್ತಿಗಳನ್ನು ಹೈಕೋರ್ಟ್ ಆದೇಶದಂತೆ ತೆರವು ಮಾಡಲು ಬಿಬಿಎಂಪಿ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ 21 ಪ್ರತಿಮೆಗಳ ಪಟ್ಟಿಯನ್ನು ಮಾಡಿದೆ.
bbmp
ನಗರದಲ್ಲಿ ಅಭಿಮಾನಿಗಳು, ಪಾಲಿಕೆಯ ನಿಯಮಗಳ ವಿರುದ್ಧ ಅಲ್ಲಲ್ಲಿ ಚಿತ್ರನಟರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಇವುಗಳಲ್ಲಿ ಅತಿಹೆಚ್ಚು ಪಶ್ಚಿಮ ವಲಯದಲ್ಲಿಯೇ ಇವೆ. ಸದ್ಯ ಅಭಿಮಾನಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಪ್ರತಿಮೆಗಳನ್ನು ತೆರವು ಮಾಡಲು ಬಿಬಿಎಂಪಿ ಸಜ್ಜಾಗಿದೆ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ನಟರು, ಸಮಾಜಸುಧಾರಕರ ಪ್ರತಿಮೆಗಳೇ ಹೆಚ್ಚು ಇವೆ. ಈ ಬಗ್ಗೆ ಸರ್ವೇ ನಡೆಸಿರುವ ಪಾಲಿಕೆಯ ಪಟ್ಟಿ ಹೀಗಿದೆ.
ಪಶ್ಚಿಮ ವಿಭಾಗದ ಒಟ್ಟು 23 ಸ್ಥಳಗಳಲ್ಲಿ ಅಕ್ರಮ ಪ್ರತಿಮೆಗಳು
- ಕಾವೇರಿನಗರ ಪಾರ್ಕ್
- ಪಟಾಗರ್ ಪಾಳ್ಯ, ವಿಜಯನಗರ (ಧ್ವಜಸ್ಥಂಭ)
- ಶಿವನಹಳ್ಳಿ ಮುಖ್ಯರಸ್ತೆ
- ಚೋಳರಪಾಳ್ಯ ಬೆಂಗಳೂರು
- ಬಳೇಪೇಟೆ ಸರ್ಕಲ್
- ಎಮ್ ಸಿ ಲೇಔಟ್, ವಿಜಯನಗರ
- ವಿಜಯನಗರ ಸಬ್ ರಿಸ್ಟ್ರಾರ್ ಆಫೀಸ್
- ಶೇಷಾದ್ರಿಪುರಂ ದತ್ತಾತ್ರೇಯ ರೋಡ್
- ಕೆಂಪಾಪುರ ಅಗ್ರಹಾರ ಮಾಗಡಿ ರಸ್ತೆ
- ಟಿಸಿಎಮ್ ರಾಯನ್ ಸರ್ಕಲ್ ಚಾಮರಾಜಪೇಟೆ
- ಟಿಆರ್ಮಿಲ್ ಸರ್ಕಲ್
- ಅಕ್ಕಿಪೇಟೆ ಸರ್ಕಲ್ ಬಳಿ
- ಮಂಜುನಾಥ ನಗರ ಸರ್ಕಲ್
- ಭಾಷ್ಯಂ ಸರ್ಕಲ್
- ಶಿವನಹಳ್ಳಿ ಮುಖ್ಯರಸ್ತೆ
- ಮಂಜುನಾಥ ನಗರ ಮುಖ್ಯರಸ್ತೆ
- ಗಾಂಧಿನಗರ ಪಾರ್ಕ್ ರಸ್ತೆ
- ಮಾಗಡಿರಸ್ತೆ ದಾಸರಹಳ್ಳಿ
- ದತ್ತಾತ್ರೇಯ ರಸ್ತೆ, ಶೇಷಾದ್ರಿಪುರಂ
- ಶೇಷಾದ್ರಿಪುರಂ ಸರ್ಕಲ್
- ಪೈಪ್ ಲೈನ್ ವಿಜಯನಗರ
- ಟೋಲ್ ಗೇಟ್ ಸರ್ಕಲ್
- ಟೋಲ್ ಗೇಟ್ ಸರ್ಕಲ್, ವಿಜಯನಗರ ಎದುರು