ಕರ್ನಾಟಕ

karnataka

ETV Bharat / state

ಚೈನ್​ ಸ್ನ್ಯಾಚಿಂಗ್​​ಗೆ ಬೌನ್ಸ್​ ಬೈಕ್​ ಬಳಕೆ... ಇಂಥ ದಡ್ಡರಿಲ್ಲ ಅಂತಿದ್ದಾರೆ ಆಯುಕ್ತರು, ಕಾರಣ?

ಬೆಂಗಳೂರಿನ ಕೆ.ಆರ್.ಪುರಂನ ಮದರ್ ಥೆರೆಸಾ ಸ್ಕೂಲ್ ಹತ್ತಿರ ಮಂಗಳವಾರ ಮಂಕಿ ಕ್ಯಾಪ್​ ಧರಿಸಿ, ಬೌನ್ಸ್​ ಬೈಕ್​ನಲ್ಲಿ ಬಂದ ಕಳ್ಳರು ಮಹಿಳೆಯ ಮೇಲೆ ಹಲ್ಲೆ ನಡೆಸಿ, ಸರಗಳ್ಳತನ ಮಾಡಿರುವುದು.

City Police Commissioner Bhaskar Rao press meet
ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್‌

By

Published : Dec 12, 2019, 1:24 PM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಸರ ಅಪಹರಣ ಮಾಡಲು ಪಲ್ಸರ್​ ಬೈಕ್​ನಲ್ಲಿ ಬರುತ್ತಿದ್ದ ಖದೀಮರು ತಮ್ಮ ವರಸೆ ಬದಲಿಸಿದ್ದು, ಬೌನ್ಸ್​ ಬೈಕ್​ (ಬಾಡಿಗೆ ಬೈಕ್​) ಬಳಸಿ ಚೈನ್​ ಸ್ನಾಚಿಂಗ್​​ಗೆ ಮುಂದಾಗಿದ್ದಾರೆ.

ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್‌

ಕೆಆರ್ ಪುರಂನ ಮದರ್ ಥೆರೆಸಾ ಸ್ಕೂಲ್ ಬಳಿಯ ಆರನೇ ಕ್ರಾಸ್ ನಲ್ಲಿ ಮಂಗಳವಾರ ಮಂಕಿ ಕ್ಯಾಪ್​ ಧರಿಸಿ ಬೌನ್ಸ್​ ಬೈಕ್​ನಲ್ಲಿ ಬಂದ ಕಳ್ಳರು ಮಹಿಳೆಯ ತಲೆಗೆ ದೊಣ್ಣೆಯಿಂದ ಬಾರಿಸಿ ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಅವರು ಕಿರುಚಿದ್ದರಿಂದ ಸುತ್ತಮುತ್ತಲ ಜನ ಸೇರಿದ್ದು, ಇದರಿಂದ ಗಾಬರಿಯಾದ ಕಳ್ಳರು ಸರ ಕಿತ್ತುಕೊಂಡು ಕಾಲ್ಕಿತ್ತಿದ್ದಾರೆ.

ಕ್ಲೆವರ್​ ಅಲ್ಲ ಮೂರ್ಖತನ: ಇನ್ನು ಈ ಕುರಿತು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್‌ಮಾತಾಡಿ ಇದು ಬುದ್ಧಿವಂತಿಕೆ ಅಲ್ಲ ಶುದ್ಧ ದಡ್ಡತನ. ಬೌನ್ಸ್​ ಬೈಕ್​ ಸಬ್​ಸ್ಕ್ರೈಬ್​ ಮಾಡಲು ದಾಖಲೆಗಳನ್ನು ಕೊಡಬೇಕು. ಬೈಕ್​​ನಲ್ಲಿ ಜಿಪಿಎಸ್​ ಟ್ರ್ಯಾಕರ್​ ಇರುವ ಕಾರಣ ಕಳ್ಳರು ಎಲ್ಲಿದ್ದಾರೆ ಎಂದು ಸುಲಭವಾಗಿ ಪತ್ತೆ ಮಾಡಬಹುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details