ಬೆಂಗಳೂರು : ಕ್ರಿಶ್ಚಿಯನ್ ಅಂದರೆ ಮತಾಂತರ ಮಾಡುವವರಲ್ಲ. ಕ್ರಿಶ್ಚಿಯನ್ ಅಂದರೆ ಪ್ರೀತಿ ಹಂಚುವುದು ಮತ್ತು ಶಾಂತಿ ಕಾಪಾಡುವುದು ಎಂದು ಆಂಗ್ಲೋ-ಇಂಡಿಯನ್ ನಾಮನಿರ್ದೇಶಿತ ಸದಸ್ಯೆ ವಿನಿಷಾ ನೀರೋ ಹೇಳಿದರು. ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಅವರು ಮಾತನಾಡಿದರು.
ಶಿಕ್ಷಣ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮ, ಚಾರಿಟಿ ಮತ್ತು ಉತ್ತಮ ನಡೆಯಾಗಿದೆ. ನನ್ನ ಬ್ಯಾಗ್ ತುಂಬಾ ವಿವಿಧ ಸಚಿವರು ಮತ್ತು ಶಾಸಕರು ಕೊಟ್ಟಿರೋ ಪತ್ರಗಳಿವೆ. ಅವೆಲ್ಲವೂ ಕ್ರಿಶ್ಚಿಯನ್ ಶಾಲೆಗಳಿಗೆ ಪ್ರವೇಶಾತಿ ಕೊಡಿಸುವ ಕುರಿತದ್ದಾಗಿದೆ. ಯಾಕೆ ಅಂದರೆ ಕ್ರಿಶ್ಚಿಯನ್ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತೆ ಎಂಬ ಕಾರಣಕ್ಕಾಗಿ ಎಂದರು.
ವಿಧಾನಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಆಂಗ್ಲೋ-ಇಂಡಿಯನ್ ಸದಸ್ಯರ ಸದಸ್ವತ್ವ ರದ್ದು ಅಸಂವಿಧಾನಿಕವಾಗಿದೆ. ಕ್ರೈಸ್ತ ಚರ್ಚ್ಗಳ ಮೇಲೆ ದಾಳಿ, ಆಹಾರ ಪದ್ದತಿಯ ವಿರುದ್ಧವಾಗಿರುವ ಕಾನೂನುಗಳು, ಮತಾಂತರ ನಿಷೇಧ ಕಾಯ್ದೆ, ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳಿಗೆ ನೀಡುತ್ತಿದ್ದ ಬೆಂಬಲ ರದ್ದು, ತಾರತಮ್ಯ ಆತಂಕ ಸೃಷ್ಟಿಸಿದೆ. ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ ಎಂದರು.