ಬೆಂಗಳೂರು: ಲಾಕ್ಡೌನ್ನಿಂದಾಗಿ ಹಲವು ಗಂಭೀರ ಸಮಸ್ಯೆಗಳು ಸೃಷ್ಟಿಯಾಗುವುದರ ಜೊತೆಗೆ ಹಲವು ಗಂಭೀರ ವಿಚಾರಗಳು ಬಯಲಾಗುತ್ತಿವೆ. ಮಕ್ಕಳಿಗೆ, ಪೋಷಕರಿಗೆ ಲಾಕ್ಡೌನ್ ಸಮಯದ ಸದುಪಯೋಗದ ಬಗ್ಗೆ ಕೌನ್ಸೆಲಿಂಗ್ ಮಾಡುತ್ತಾ ಬಂದಿರುವ ಚೈಲ್ಡ್ ರೈಟ್ಸ್ ಸಂಸ್ಥೆಯ ನಿರ್ದೇಶಕ ನಾಗಸಿಂಹ ಜಿ. ರಾವ್ ಈಟಿವಿ ಭಾರತದ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಎಷ್ಟೋ ಮಕ್ಕಳು, ಸಿಗರೇಟ್ ಸೇದುವುದರಿಂದ ರಾತ್ರಿ ನಿದ್ದೆ ಬರುವುದಿಲ್ಲ. ಹೀಗಾಗಿ ಹೆಚ್ಚು ಕಾಲ ಓದಬಹುದು ಅಂತ ಧೂಮಪಾನದ ಚಟಕ್ಕೆ ಬಿದ್ದಿದ್ದರು. ಆದ್ರೆ ಲಾಕ್ಡೌನ್ನಿಂದ ಸಿಗರೇಟ್ ಸಿಗುತ್ತಿಲ್ಲ. ಕೈಕಾಲು ನಡುಗುತ್ತಿವೆ. ಮನೆಯಲ್ಲಿ ಹೇಳಲು ಭಯ. ಏನು ಮಾಡಬೇಕು ಎಂದು ಕರೆ ಮಾಡುತ್ತಿದ್ದಾರೆ. ಅವರಿಗೆ ಮೂರ್ನಾಲ್ಕು ದಿನಗಳ ಕಾಲ ಸಮಾಧಾನ ಮಾಡಿ, ಆ ಚಟದಿಂದ ಹೊರ ಬರುವಂತೆ ಮಾಡಲು ಪ್ರಯತ್ನಿಸಲಾಗಿದೆ ಎಂದರು.
ಅಲ್ಲದೇ ಪ್ರತಿದಿನ ಹತ್ತರಿಂದ ಇಪ್ಪತ್ತು ಫೋನ್ ಕರೆಗಳಿಗೆ ಸ್ಪಂದಿಸುತ್ತಿರುವ ನಾಗಸಿಂಹ ಜಿ. ರಾವ್, ಮಕ್ಕಳಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕುರಿತು ಅರಿವು ಮೂಡಿಸಲು ಆರಂಭಿಸಿರುವ ರಾವ್, ಈಗ ಲಾಕ್ಡೌನ್ನಲ್ಲಿ ಮಕ್ಕಳು ಎದುರಿಸುತ್ತಿರುವ ಗೊಂದಲಗಳಿಗೆ ಕೌನ್ಸೆಲಿಂಗ್ ಮಾಡುತ್ತಿದ್ದಾರೆ. ಮೊದಮೊದಲು 20-21ನೇ ಸಾಲಿನ ಆರ್ಟಿಇ ಶೇಕಡಾ 25ರಷ್ಟು ಮೀಸಲಾತಿಯ ಬಗ್ಗೆ ವಿವರಣೆ ಕೇಳಲು ಪೋಷಕರು ಕರೆ ಮಾಡುತ್ತಿದ್ದರು.