ಕರ್ನಾಟಕ

karnataka

ETV Bharat / state

ನಾಲ್ವರು ಮಕ್ಕಳಿದ್ದರೂ ಬೀದಿಗೆ ತಳ್ಳಿದರು.. ಅನಾಥಳಂತಾಗಿದ್ದ ಅಜ್ಜಿಗೆ ದಾರಿ ತೋರಿದ ವನಿತಾ ಸಹಾಯವಾಣಿ

ಇವರಿಗೆ ನಾಲ್ವರು ಮಕ್ಕಳಿದ್ದರೂ ಕೂಡ ಬೀದಿ ಬದಿಯಲ್ಲಿ ಜೀವನ ಸಾಗಿಸುವಂತಾಗಿತ್ತು. ಓರ್ವ ಮಗಳು ವಿದ್ಯಾಭ್ಯಾಸ ಪಡೆದು ಗಂಡನ ಜೊತೆಗಿದ್ದಾರೆ. ಆದ್ರೆ, ಮತ್ತೊಬ್ಬ ಮಗಳು ಇಂಜಿನಿಯರ್ ಆಗಿದ್ದಾರೆ. ಹಾಗೆಯೇ ಓರ್ವ ಮಗ ಜಡ್ಜ್ ಆಗಿದ್ದರೆ, ಮತ್ತೊಬ್ಬ ಇಂಜಿನಿಯರ್ ಇದ್ದಾರೆ. ಇಷ್ಟೆಲ್ಲ ಇದ್ದರೂ ಕೂಡ ಗೌರಮ್ಮಗೆ ಸೂಕ್ತ ನೆಲೆ ಇಲ್ಲದಂತಾಗಿದೆ.

ತಾಯಿ ಗೌರಮ್ಮ

By

Published : Mar 29, 2019, 2:12 PM IST

ಬೆಂಗಳೂರು : ತಾಯಿ ಅಂದ್ರೇ ದೇವರು ಅಂತಾರೆ.. ಆದರೆ, ನಾಲ್ವರು ಮಕ್ಕಳಿದ್ದರೂ ಕೂಡ ತಾಯಿಯೊಬ್ಬರು ಬೀದಿಗೆ ಬಿದ್ದಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಗೌರಮ್ಮ ಎಂಬ ಮಹಿಳೆ ಇಂದಿರಾನಗರದಲ್ಲಿ ವಾಸವಿದ್ದಾರೆ. ಇವರಿಗೆ ನಾಲ್ವರು ಮಕ್ಕಳಿದ್ದರೂ ಕೂಡ ಬೀದಿ ಬದಿಯಲ್ಲಿ ಜೀವನ ಸಾಗಿಸುವಂತಾಗಿತ್ತು. ಓರ್ವ ಮಗಳು ವಿದ್ಯಾಭ್ಯಾಸ ಪಡೆದು ಗಂಡನ ಜೊತೆಗಿದ್ದಾರೆ.​ ಆದ್ರೆ, ಮತ್ತೊಬ್ಬ ಮಗಳು ಇಂಜಿನಿಯರ್ ಆಗಿದ್ದಾಳೆ. ಹಾಗೆಯೇ ಓರ್ವ ಮಗ ಜಡ್ಜ್ ಆಗಿದ್ದರೆ, ಮತ್ತೊಬ್ಬ ಇಂಜಿನಿಯರಾಗಿದ್ದಾರೆ. ಇಷ್ಟೆಲ್ಲ ಇದ್ದರೂ ಕೂಡ ಗೌರಮ್ಮಗೆ ನೆಲೆ ಇಲ್ಲದಂತಾಗಿತ್ತು.

ಮೊದಲು ತಮ್ಮ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ನನ್ನ ಗಂಡ ತೀರಿಕೊಂಡ ಬಳಿಕ ಮಕ್ಕಳು ನನ್ನನ್ನು ಬೀದಿಗೆ ತಳ್ಳಿದ್ದಾರೆ. ಆಸರೆಗಾಗಿ ಅಂಗಲಾಚಿ ಬೇಡಿದರೂ ಯಾರೂ ಕನಿಕರ ತೋರಿಸಿಲ್ಲ. ಯಾವುದೇ ಸಹಾಯ ಮಾಡದೇ ತಮ್ಮ ಪಾಡಿಗೆ ಸಂತಸವಾಗಿದ್ದಾರೆ. ಹೀಗಾಗಿ ತನಗೆ ನ್ಯಾಯ ಬೇಕೆಂದು ಇಲ್ಲಿನ ಲ್ಯಾವೆಲಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್‌ ಕಚೇರಿಗೆ ಗೌರಮ್ಮ ಬಂದಿದ್ದರು.

ಆದರೆ, ಕಮಿಷನರ್ ಕಚೇರಿಯಲ್ಲಿ ಎಲ್ಲಿ, ಹೇಗೆ? ಯಾರನ್ನ ಭೇಟಿಯಾಗಬೇಕೆಂಬ ಅರಿವು ಇರದೇ ಕಣ್ಣೀರು ಹಾಕುತ್ತಿದ್ದರು. ಹೀಗೆ ಅಸಹಾಯಕರಾಗಿದ್ದ ಗೌರಮ್ಮನ ಜೊತೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಚಿಟ್​ ಚಾಟ್​ ಇಲ್ಲಿದೆ..

ತಾಯಿ ಗೌರಮ್ಮ

ಸಹಾಯವಾಣಿ ಕರೆಗೆ ಸ್ಪಂದಿಸಿದ ಮಕ್ಕಳು :

ಗೌರಮ್ಮನ ಸಮಸ್ಯೆ ಆಲಿಸಿ ಕಮಿಷನರ್ ಕಚೇರಿ ಬಳಿ ಇರುವ ವನಿತಾ ಸಹಾಯವಾಣಿಗೆ ತೆರಳಿ ಮಾತುಕತೆ ನಡೆಸಲಾಗಿದೆ. ಹಿರಿಯರ ಸಹಾಯವಾಣಿಗೆ ಕರೆದೊಯ್ದು ಅಜ್ಜಿಯ ಸಮಸ್ಯೆ ಹೇಳಿದಾಗ, ಹಿರಿಯ ವನಿತಾ ಸಹಾಯವಾಣಿ ಸಹಾಯಕಿ ಸಂಧ್ಯಾ ಅವರು ಗೌರಮ್ಮನ ಸಮಸ್ಯೆ ಆಲಿಸಿ ನಾಲ್ವರು ಮಕ್ಕಳಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದರು. ಕರೆ ಸ್ವೀಕರಿಸಿದ ಮಕ್ಕಳಲ್ಲಿ ಇಬ್ಬರು ತಾಯಿಗೆ ನೆರವಾಗಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details