ದೊಡ್ಡಬಳ್ಳಾಪುರ: ಕೋಳಿಗಳನ್ನು ತುಂಬಿದ್ದ ಕ್ಯಾಂಟರ್ನ ಟೈರ್ ಸ್ಫೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿ ಗಾಡಿ ಪಲ್ಟಿ ಹೊಡೆದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಈ ವೇಳೆ ಗ್ರಾಮಸ್ಥರು ಮತ್ತು ದಾರಿಹೋಕರರು ತಮ್ಮ ಕೈಗೆ ಸಿಕ್ಕಷ್ಟು ಕೋಳಿಗಳನ್ನು ಬಾಚಿಕೊಂಡು ಹೋಗಿದ್ದಾರೆ.
2 ಸಾವಿರ ಕೋಳಿಗಳಿದ್ದ ಕ್ಯಾಂಟರ್ ಪಲ್ಟಿ.. ಕೈಗೆ ಸಿಕ್ಕಷ್ಟು ಹೊತ್ತೊಯ್ದ ದೊಡ್ಡಬಳ್ಳಾಪುರ ಜನ!
ಮಾಗಡಿಯಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದ ಕೋಳಿಗಳನ್ನು ತುಂಬಿದ್ದ ಕ್ಯಾಂಟರ್ ಕುರುಬರಹಳ್ಳಿ ಬಳಿ ಪಲ್ಟಿ ಹೊಡೆದಿದ್ದು, ಗ್ರಾಮಸ್ಥರು ಮತ್ತು ದಾರಿಹೋಕರರು ತಮ್ಮ ಕೈಗೆ ಸಿಕ್ಕಷ್ಟು ಕೋಳಿಗಳನ್ನು ಬಾಚಿಕೊಂಡು ಹೋಗಿದ್ದಾರೆ.
2 ಸಾವಿರ ಕೋಳಿಗಳಿದ್ದ ಕ್ಯಾಂಟರ್ ಪಲ್ಟಿ
ಮಾಗಡಿಯಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದ ಕೋಳಿಗಳನ್ನು ತುಂಬಿದ್ದ ಕ್ಯಾಂಟರ್ ಕುರುಬರಹಳ್ಳಿ ಬಳಿ ಪಲ್ಟಿ ಹೊಡೆದಿದೆ. ಕ್ಯಾಂಟರ್ನಲ್ಲಿ ಚಾಲಕ ಮತ್ತು ಸಹಾಯಕನಿಗೆ ಸಣ್ಣ-ಪುಟ್ಟ ಗಾಯಾಗಳಾಗಿವೆ. ಕ್ಯಾಂಟರ್ ಗಾಡಿ ದೊಡ್ಡಬಳ್ಳಾಪುರದ ಅಂಬರೀಷ್ ಅವರಿಗೆ ಸೇರಿದ್ದು, ಕೋಳಿ ಫಾರಂಗಳಿಂದ ಕೋಳಿಗಳನ್ನು ಖರೀದಿಸಿ ದೊಡ್ಡಬಳ್ಳಾಪುರದ ಕೋಳಿ ಅಂಗಡಿಗಳಿಗೆ ಹೋಲ್ ಸೇಲ್ ವ್ಯಾಪಾರ ಮಾಡುತ್ತಿದ್ದರು. ಕ್ಯಾಂಟರ್ ನಲ್ಲಿ 2,000ಕ್ಕೂ ಹೆಚ್ಚು ಕೋಳಿಗಳಿದ್ದು ಅಂದಾಜು 2 ಲಕ್ಷ ರೂ. ನಷ್ಟವಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.