ಬೆಂಗಳೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮೂರನೇ ತರಗತಿ ವಿದ್ಯಾರ್ಥಿನಿ ಸ್ವಚ್ಛ ಭಾರತ ರಾಯಭಾರಿಯಾಗಿ ಸ್ವಚ್ಛತೆ ಬಗ್ಗೆ ಲೇಖನ ಬರೆದು ಗಾಂಧಿ ಭವನದಿಂದ ಚರಕವನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.
ಸ್ವಚ್ಛತೆ ಬಗ್ಗೆ ಲೇಖನ ಬರೆದ ಮೂರನೇ ತರಗತಿ ವಿದ್ಯಾರ್ಥಿನಿಗೆ ಚರಕದ ಉಡುಗೊರೆ
ಸ್ವಚ್ಛ ಭಾರತದ ಬಗ್ಗೆ ಲೇಖನ ಬರೆದ ಮೂರನೇ ತರಗತಿ ವಿದ್ಯಾರ್ಥಿನಿಗೆ ಗಾಂಧಿ ಭವನದಿಂದ ಚರಕವನ್ನು ಉಡುಗೊರೆಯಾಗಿ ನೀಡಲಾಗಿದೆ.
ಸ್ವಚ್ಚತೆ ಬಗ್ಗೆ ಲೇಖನ ಬರೆದ ಮೂರನೇ ತರಗತಿ ವಿದ್ಯಾರ್ಥಿನಿಗೆ ಚರಕದ ಉಡುಗೊರೆ
ಬೆಂಗಳೂರಿನ ಪ್ರತಿಷ್ಠಿತ ಗಾಂಧಿ ಭವನ ಹೊರತರುವ ಅಮರ ಬಾಪು ಚಿಂತನ ದ್ವೈಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಶಂಕರ್ ಅವರ ಪುತ್ರಿ ಸ್ಮೃತಿ ಸ್ವಚ್ಛತೆ ಬಗ್ಗೆ ಬರೆದ ಲೇಖನ ಪ್ರಕಟಗೊಂಡಿದ್ದು, ಲೇಖನಕ್ಕಾಗಿ ಚರಕವನ್ನು ಬಹುಮಾನವಾಗಿ ಪಡೆದುಕೊಂಡಿದ್ದಾರೆ.
ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿರುವ ಕೃಷ್ಣಾ ಇಂಟರ್ ನ್ಯಾಷನಲ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಸ್ಮೃತಿಗೆ ಗಾಂಧಿ ಭವನದ ನೆನಪಿನ ಕೊಡುಗೆಯಾಗಿ ಚರಕವನ್ನು ನೀಡಿ ಗೌರವಿಸಲಾಗಿದೆ.
Last Updated : Mar 2, 2021, 10:44 AM IST