ಬೆಂಗಳೂರು:ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂದು ಸರಗಳ್ಳತನ ಕೈ ಹಾಕಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರೇಯಸಿಗಾಗಿ ಖರ್ಚು ಮಾಡಲು ಸರಗಳ್ಳತನಕ್ಕೆ ಕೈ ಹಾಕಿದ್ದ ಲವರ್ ಬಾಯ್ ಈಗ ಪೊಲೀಸರ ಅತಿಥಿ - Kannada news
ಪ್ರೀತಿ ಮಾಡಿ ತನ್ನ ಪ್ರೇಯಸಿಯನ್ನು ಚನ್ನಾಗಿ ನೋಡಿಕೊಳ್ಳಬೇಕೆಂದು ಇಲ್ಲೊಬ್ಬ ಯುವಕ ಸರಗಳ್ಳತನಕ್ಕೆ ಕೈ ಹಾಕಿದ್ದು ಸದ್ಯ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ.
ಲವರ್ ಬಾಯ್
ಕಳೆದ ಆರು ವರ್ಷಗಳ ಹಿಂದೆ ಉಪ್ಪಾರಪೇಟೆ ಬಳಿ ಇರುವ ಸುಖ ಸಾಗರ್ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ವ್ಯಕ್ತಿ ತನ್ನ ಮನೆ ಪಕ್ಕದಲ್ಲಿರುವ ಮಹಿಳೆಯ ಪ್ರೇಮ ಪಾಶದಲ್ಲಿ ಬಿದ್ದಿದ್ದ. ಆಕೆಯನ್ನು ಸಂತೋಷಪಡಿಸಲು ಸರಗಳ್ಳತನಕ್ಕೆ ಮಾಡುತ್ತಿದ್ದ ಎಂದು ವಿಜಯನಗರ ಉಪವಿಭಾಗದ ಎಸಿಪಿ ಧಮೇಂದ್ರ ತಿಳಿಸಿದ್ದಾರೆ