ಕರ್ನಾಟಕ

karnataka

ETV Bharat / state

ಸಿಇಟಿ ಪರೀಕ್ಷೆ: ಕೇಂಬ್ರಿಡ್ಜ್​‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ - ಸಿಇಟಿ ಪರೀಕ್ಷೆ

ಸಿಇಟಿ ಪರೀಕ್ಷೆ ಹಿನ್ನೆಲೆ ಕೆ ಆರ್ ​ಪುರದ ಕೇಂಬ್ರಿಡ್ಜ್​​ ‌ಕಾಲೇಜಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

Cambridge College
ಸಿಇಟಿ ಪರೀಕ್ಷೆ : ಕೇಂಬ್ರಿಜ್ಡ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ

By

Published : Jul 30, 2020, 3:45 PM IST

ಬೆಂಗಳೂರು:ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿರುವುದರ ನಡುವೆಯೂ ಕೆ ಆರ್ ​ಪುರದ ಕೇಂಬ್ರಿಡ್ಜ್​ ‌ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಸಿಇಟಿ ಪರೀಕ್ಷೆ : ಕೇಂಬ್ರಿಡ್ಜ್​ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ

‌ಕಾಲೇಜಿನ ಅಧ್ಯಕ್ಷ ಡಿ.ಕೆ. ಮೋಹನ್ ಅವರು ವಿದ್ಯಾರ್ಥಿಗಳಿಗೆ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸಿಬ್ಬಂದಿಗೆ ಸೂಚಿಸಿದ್ದರು. ಅದರಂತೆಯೇ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಸ್ಯಾನಿಟೈಸರ್ ಮತ್ತು ಟೆಂಪರೇಚರ್ ಚೆಕ್ ಮಾಡಿ ಅವರಿಗೆ ಜಾಗೃತಿಯಿಂದ ಪರೀಕ್ಷೆ ಬರೆಯುವಂತೆ ತಿಳಿಸಿದರು. ದೊಡ್ಡದಾದ ಸ್ಯಾನಿಟೈಸ್ ಮಷಿನ್​ನೊಳಗೆ ಒಬ್ಬೊಬ್ಬರೆ ಸಾಲಾಗಿ ಹೋಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮೊದಲ ದಿನದ ಪರೀಕ್ಷೆ ಬರೆದರು.

ಪ್ರಾಂಶುಪಾಲ ಸುರೇಶ್ ಅವರು ಕ್ಲಾಸ್ ರೂಂಗೆ ಹೋಗಿ ವಿದ್ಯಾರ್ಥಿಗಳ ಸೌಕರ್ಯವನ್ನು ಪರಿಶೀಲನೆ ನಡೆಸಿದರು. ನಿಮಗೆ ಯಾವುದೇ ತೊಂದರೆ ಆದರು ನಮ್ಮ‌ ಸಿಬ್ಬಂದಿಗೆ ತಿಳಿಸಿ ಎಂದು ಹೇಳಿದರು. ಕೇಂಬ್ರಿಡ್ಜ್​‌ ಕಾಲೇಜಿನ ಅಧ್ಯಕ್ಷ ಡಿ.ಕೆ. ಮೋಹನ್ ಮಾತನಾಡಿ, ವಿದ್ಯಾರ್ಥಿಗಳ ರಕ್ಷಣೆ ನಮ್ಮ ಕರ್ತವ್ಯ. ಆದ್ದರಿಂದಲೇ ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕ್ಲಾಸ್​ ನಲ್ಲಿ ಸ್ಯಾನಿಟೈಸ್ ಮಾಡಿ ಹೊರಗಡೆ ಬೃಹತ್ ಗಾತ್ರದ ಸ್ಯಾನಿಟೈಸ್ ಯಂತ್ರ ಇಟ್ಟು ಒಂದೇ ಬಾರಿ ಐದರಿಂದ ಹತ್ತು ವಿದ್ಯಾರ್ಥಿಗಳು ಒಳ‌ ಹೋಗಬಹುದಾಗಿದೆ ಎಂದು ತಿಳಿಸಿದರು.

ಒಟ್ಟು 408 ವಿದ್ಯಾರ್ಥಿಗಳು ಇಂದಿನ ಸಿಇಟಿ ಪರೀಕ್ಷೆಗೆ ಆಗಮಿಸಿದ್ದು, ಅವರ ಸುರಕ್ಷತೆಗೆ ವೈದ್ಯರು, ನರ್ಸ್​ಗಳ ಸೇವೆಯನ್ನು ಒದಗಿಸಿದ್ದೇವೆ. ಮಾಸ್ಕ್ ಧರಿಸದವರಿಗೆ ಉಚಿತವಾಗಿ ಹೊಸ ಮಾಸ್ಕ್​ಗಳನ್ನು ನೀಡುತಿದ್ದೇವೆ. ಸರ್ಕಾರ ಹೇಳಿರುವಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details