ಬೆಂಗಳೂರು : ರಾಜ್ಯ ಕೃಷಿ ಇಲಾಖೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜನೆ ಮಾಡಿದ್ದ ಮೂರು ದಿನಗಳ “ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2024 ಕ್ಕೆ ವಿದ್ಯುತಕ್ತವಾಗಿ ತೆರೆ ಎಳೆಯಲಾಯಿತು. ರಾಜ್ಯದ ಸಾವಯವ ಹಾಗೂ ಸಿರಿಧಾನ್ಯಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಮುಖ್ಯ ಉದ್ದೇಶಗಳೊಂದಿಗೆ ಮೇಳವನ್ನು ಆಯೋಜನೆ ಮಾಡಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಜವಾರಿ ಸಿರಿಧಾನ್ಯದ ಬಿಸ್ಕೆಟ್, ಹಾಸನ ಮತ್ತು ಕೊಡಗು ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಆವನಿ ಸಿರಿಧಾನ್ಯದ ಬಿಸ್ಕೆಟ್ಗಳನ್ನು ಹಾಗು ಬೆಂಗಳೂರು ಕೃಷಿ ವಿವಿ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಹೊರತಂದಿರುವ ಸಿರಿಧಾನ್ಯದ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಲಾಸ್ಟ್ ಗ್ರೇನ್ಸ್ ರಿವೈವ್ ಮಿಲ್ಲೆಟ್ಸ್ ಕೃತಿಯನ್ನು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಬಿಡುಗಡೆ ಮಾಡಿದರು.
ರೆಟ್ರೋಶಿಪ್ ಸಂಸ್ಥೆಯ ಸಂಸ್ಕರಣಾ ಘಟಕದ ಮಾಲ್ಟ್ ವೆಂಡಿಂಗ್ ಮಷಿನ್ ಬಿಡುಗಡೆ ಮಾಡಲಾಯಿತು. ಇದು ಏಳು ವಿವಿಧ ಮಾದರಿಯ ಪಾನೀಯಗಳು ಲಭ್ಯವಾಗಲಿವೆ. ಇದೇ ವೇಳೆ ಅತ್ಯುತ್ತಮ ಪ್ರದರ್ಶನ ಮಳಿಗೆಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.