ಬೆಂಗಳೂರು:ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೇಂದ್ರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುನೀಲ್ ಕುಮಾರ್ ಚೌದರಿ ಅಲಿಯಾಸ್ ಅಜಾದ್ ಸಿಂಗ್, ರಿಜೇಶ್ ಪಿ ಅಲಿಯಾಸ್ ರುಷಿಂದ್ರ, ರಾಜೇಶ್ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ವ್ಯಾಮ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಯನ್ನ ಯುಬಿಸಿಟಿಯಲ್ಲಿ ತೆರೆದು ಸಾರ್ವಜನಿಕರಿಂದ ₹ 25000 ಹಣ ಕಟ್ಟಿದರೆ, 20 ವಾರಗಳ ವರೆಗೆ ₹1250 ಹಣ ಬರುತ್ತದೆ. 21ನೇ ವಾರಕ್ಕೆ ಹಿಂದೆ ಕಟ್ಟಿದ್ದಂತಹ ₹ 25,000 ಹಣವನ್ನು ಸಹ ವಾಪಸ್ ನೀಡುತ್ತೇವೆ. ಹಾಗೆಯೇ 50000ರೂ. ಕಟ್ಟಿದರೆ ವಾರಕ್ಕೆ ₹2500 ನಂತೆ 20ವಾರ ಹಣ ಬರುತ್ತದೆ ಎಂದು ನಂಬಿಸಿದ್ದರು. ಗ್ರಾಹಕರಿಂದ ಹಣ ಪಡೆದ ಬಳಿಕ ವಂಚಿಸುತ್ತಿದ್ದರು ಎಂಬ ಬಗ್ಗೆ ದೂರುಗಳು ದಾಖಲಾಗಿದ್ದವು.