ಬೆಂಗಳೂರು :ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿರೋ ಶಂಕಿತನ ಪತ್ನಿಗೆ ವಿಚಾರಣೆಗೆ ಹಾಜರಾಗಲು ಎಸ್‌ಐಟಿ ನೀಡಿತ್ತು. ಆದರೆ, ನೋಟಿಸ್ಗೆ ಕೌಟುಂಬಿಕ ಕಾರಣ ನೀಡಿ ಶಂಕಿತನ ಪತ್ನಿ ವಿಚಾರಣೆಗೆ ಗೈರು ಹಾಜರಿಯಾಗಿದ್ದಾರೆ.
ಶಿರಾ ಮೂಲದ ವ್ಯಕ್ತಿ ಸಿಡಿ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆತನ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು. ಆಕೆಯ ಪರವಾಗಿ ವಕೀಲರಾದ ಭವ್ಯ ಎಂಬುವರು ವಿಚಾರಣೆಗೆ ಹಾಜರಾಗಿದ್ದಾರೆ.
ಈ ಬಗ್ಗೆ ತಮ್ಮ ಕಕ್ಷಿದಾರರ ಪರ ಮಾತನಾಡಿದ ವಕೀಲರಾದ ಭವ್ಯ ಅವರು, ಶಿರಾ ಮೂಲದ ವ್ಯಕ್ತಿಯ ಪತ್ನಿ ಇಂದು ವಿಚಾರಣೆಗೆ ಹಾಜರಾಗುವುದಿಲ್ಲ. ಕಕ್ಷಿದಾರರಿಗೆ ಒಂದು ವರ್ಷದ ಪುಟ್ಟ ಮಗುವಿದೆ. ಅಲ್ಲದೇ ಶಿರಾದಿಂದ ಬರಲು ದೂರ ಸಹ ಆಗುತ್ತದೆ.
ಸೂತ್ರದಾರ ಎನ್ನಲಾದವನ ತಾಯಿಯ ಆರೋಗ್ಯ ಸರಿಯಿಲ್ಲ. ಅದಕ್ಕಾಗಿ ಮಾನವೀಯ ಆಧಾರದ ಮೇಲೆ ಮನವಿ ಮಾಡಿದ್ದೇವೆ. ಮೂರು ದಿನ ಬಿಟ್ಟು ವಿಚಾರಣೆಗೆ ಹಾಜರಾಗಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದೇವೆ.
ಅದಕ್ಕೆ ತನಿಖಾಧಿಕಾರಿ ಹೆಚ್ ಎಂ ಮೀನಾಕ್ಷಿ ಅವರು ಅನುಮತಿ ನೀಡಿದ್ದಾರೆ. ಮಾ.20ರಂದು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಶಂಕಿತನ ಪತ್ನಿ ಪರ ವಕೀಲರಾದ ಭವ್ಯ ಅವರು ಹೇಳಿದ್ದಾರೆ.