ಬೆಂಗಳೂರು:ಸಿಡಿಯಲ್ಲಿದ್ದ ಯುವತಿ ಮಾತನಾಡಿದ್ದಾಳೆ ಎಂದು ಹೇಳಲಾಗುತ್ತಿರುವ ಆಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನಾಳೆ(ಶನಿವಾರ)ಇದಕ್ಕಿಂತಲೂ ಸ್ಫೋಟಕ ಮಾಹಿತಿ ಇದೆ ಎಂದಿದ್ದಾರೆ.
ನಾಳೆ(ಶನಿವಾರ) ಸಂಜೆ 4ರಿಂದ 6 ಗಂಟೆಯೊಳಗೆ ದೊಡ್ಡ ಬಾಂಬ್ ಸ್ಫೋಟವಾಗುತ್ತದೆ. ದೊಡ್ಡ ಮಟ್ಟದ ಬೆಳವಣಿಗೆ ಆಗಲಿದ್ದು, ನಾನೇ ಆಗ ಮಾತನಾಡುತ್ತೇನೆ. ಅಲ್ಲಿಯವರೆಗೆ ವಕೀಲರು ಏನನ್ನೂ ಮಾತನಾಡದಂತೆ ಹೇಳಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಾನು ಈಗ ಆ ಆಡಿಯೋ ಟಿವಿನಲ್ಲಿ ನೋಡಿದೆ. ಆ ಹೆಣ್ಣು ಮಗು ಕೂಡ ಗ್ರಾಫಿಕ್ಸ್ ಎಂದು ಹೇಳಿದೆ. ನಂದಲ್ಲ ಅಂತಾ ಹೇಳಿದ್ದಾರೆ. ನಾಳೆ(ಶನಿವಾರ) ಸಂಜೆ 4ರಿಂದ 6ಗಂಟೆಗೆ ದೊಡ್ಡ ಸುದ್ದಿ ಸ್ಫೋಟ ಮಾಡುತ್ತೇನೆ ಎಂದಿದ್ದಾರೆ.
ಆಡಿಯೋ ವೈರಲ್ ಬೆನ್ನಲ್ಲೇ ಜಾರಕಿಹೊಳಿ ಹೇಳಿಕೆ ಮಾಧ್ಯಮದವರ ಪ್ರಶ್ನೆಗಳಿಗೆ ತಮ್ಮ ಸ್ಪಷ್ಟೀಕರಣ ನೀಡುತ್ತಾ, ನಾನು ತಪ್ಪು ಮಾಡಿಲ್ಲ. ನಾನು ಜಾಮೀನು ಪಡೆಯುವುದಿಲ್ಲ. ಆ ಹೆಣ್ಣು ಮಗಳೇ ನಕಲಿ ಎಂದು ಹೇಳಿದ್ದಾಳೆ. ಇದು ಟ್ರೈಲರ್ ಎಂದು ಹೇಳಲ್ಲ, ಇನ್ನೂ ಸಾಕಷ್ಟು ಇದೆ. ನಾಳೆ ಸಂಜೆ ಇನ್ನಷ್ಟು ಮಾಹಿತಿ ಮಾಧ್ಯಮದ ಮತ್ತು ರಾಜ್ಯದ ಜನರ ಮುಂದೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ. ಜತೆಗೆ ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ಆಗಿರೋದು ತಿಳಿದಿದೆ. ತನಿಖೆ ಆಗಲಿ. ಮುಂದೆ ಏನೆಂದು ನೋಡೋಣ. ಹೆಸರಿದೆ ಅಂತ ಡಿಕೆಶಿ ಆರೋಪಿಯಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿ. ನನ್ನಂತೆ ಅವರು ರಾಜೀನಾಮೆ ನೀಡುವುದು ಬೇಡ ಎಂದಿದ್ದಾರೆ.
ಇದನ್ನೂ ಓದಿ: ಡಿಕೆಶಿ ನನ್ನ ಹಳೆಯ ಗೆಳೆಯ, ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರೆಯಬೇಕು: ರಮೇಶ್ ಜಾರಕಿಹೊಳಿ
ಡಿ.ಕೆ ಶಿವಕುಮಾರ್ ನನ್ನ ಹಳೆಯ ಗೆಳೆಯ. ನನ್ನ ಕಷ್ಟ ಕಾಲದಲ್ಲಿ ಕೂಡಿ ಬಂದವರು.ಅವರ ಬಗ್ಗೆ ನಾನು ಆರೋಪ ಮಾಡುವುದಿಲ್ಲ. ಯಾವುದೇ ಸಾಕ್ಷಿ ಆಧಾರಗಳಿಲ್ಲದೇ ಏನು ಹೇಳಲ್ಲ. ಡಿಕೆ ಶಿವಕುಮಾರ್ಗೆ ಒಳ್ಳೆಯದಾಗಲಿ ಎಂದಿದ್ದಾರೆ.