ಕರ್ನಾಟಕ

karnataka

ETV Bharat / state

ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಸಿಸಿಬಿ ದಾಳಿ, ಮೂವರ ಬಂಧನ - ಆರೋಪಿಗಳ ಬಂಧನ

ಚಿಕ್ಕದಾದ ಶೆಡ್​ನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಆರೋಪಿಗಳು ಜನರ ವಾಸ ಸ್ಥಳದಲ್ಲಿ, ಸುರಕ್ಷಿತವಲ್ಲದ ಸ್ಥಳದಲ್ಲಿ, ಮುಂಜಾಗೃತ ಕ್ರಮ ಕೈಗೊಳ್ಳದೆ, ಪರವಾನಗಿ ಪಡೆದುಕೊಳ್ಳದೇ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುತ್ತಿದ್ದರು.

illegal gas filling
illegal gas filling

By

Published : Oct 8, 2020, 11:38 AM IST

ಬೆಂಗಳೂರು:ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಗೆ ಅಗತ್ಯವಿರುವ ವಸ್ತುಗಳಲ್ಲೊಂದಾದ, ಪ್ರತಿಷ್ಟಿತ ಕಂಪೆನಿಗಳ ಹೆಸರಿನ ಗ್ಯಾಸನ್ನು ಅಕ್ರಮವಾಗಿ ರೀಫಿಲ್ಲಿಂಗ್ ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ತನಿಖೆಯ ವೇಳೆ ಅಕ್ರಮ ಹಣ ಸಂಪಾದನೆ ಮಾಡಲು ಈ ರೀತಿಯಾದ ಕಾರ್ಯದಲ್ಲಿ ಭಾಗಿಯಾಗಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ನಾರಾಯಣ, ಮಹೇಂದ್ರ, ಮೌನೇಶ್ ಬಂಧಿತ ಆರೋಪಿಗಳು.

ಅಕ್ರಮ ಗ್ಯಾಸ್ ರೀಫಿಲ್ಲಿಂಗ್

ಈ ಆರೋಪಿಗಳು ಬೆಂಗಳೂರು ನಗರದ ಆರ್​.ಟಿ.ನಗರ ಪೋಸ್ಟ್ ಹತ್ತಿರ ಇರುವ ಚಿಕ್ಕದಾದ ಶೆಡ್​ನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅಗತ್ಯ ವಸ್ತುಗಳ ಪಟ್ಟಿಯಲ್ಲಿರುವ ಗ್ಯಾಸ್ ಸಿಲಿಂಡರ್​​ಗಳನ್ನು ಜನರ ವಾಸ, ಸುರಕ್ಷಿತವಲ್ಲದ ಸ್ಥಳದಲ್ಲಿ, ಮುಂಜಾಗೃತ ಕ್ರಮ ಕೈಗೊಳ್ಳದೆ, ಪರವಾನಗಿ ಪಡೆದುಕೊಳ್ಳದೇ, ದಹನಕಾರಿ ಪ್ರವೃತ್ತಿ ಇರುವ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುತ್ತಿದ್ದರು.

ಅಕ್ರಮ ಗ್ಯಾಸ್ ರೀಫಿಲ್ಲಿಂಗ್

ಈ ಕುರಿತು ಮಾಹಿತಿ ಪಡೆದು ಸಿಸಿಬಿ ದಾಳಿ ‌ಮಾಡಿದಾಗ ಆರೋಪಿಗಳು ಬೆಂಕಿ ಅವಘಡ ತಪ್ಪಿಸಲು ಯಾವುದೇ ಮುಂಜಾಗ್ರತ ಕ್ರಮವನ್ನು ಅನುಸರಿಸದೆ, ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಆಟೋರಿಕ್ಷಾದಲ್ಲಿ ಮಾರಾಟ ಮಾಡುತ್ತಿದ್ದರು. ದಾಳಿ ನಡೆಸಿದಾಗ ಪ್ರತಿಷ್ಠಿತ ಕಂಪನಿಗಳಾದ ಭಾರತ್, ಇಂಡೇನ್, ಹೆಚ್​ಪಿ ಮತ್ತು ಟೋಟಲ್ ಗ್ಯಾಸ್ ಕಂಪನಿಗಳ ಗೃಹಬಳಕೆಯ ಒಟ್ಟು 125 ಗ್ಯಾಸ್ ಸಿಲಿಂಡರ್​ಗಳು ಪತ್ತೆಯಾಗಿದೆ.

ಸದ್ಯ ಪ್ರಕರಣದಲ್ಲಿ ಶಿವಣ್ಣ, ಶ್ರೀನಿವಾಸ್, ಕಾಂತರಾಜ್ ಮತ್ತು ಶಫಿ ತಲೆಮರೆಸಿಕೊಂಡಿದ್ದು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಶೋಧ ಮುಂದುವರೆಸಲಾಗಿದೆ.

ABOUT THE AUTHOR

...view details