ಕರ್ನಾಟಕ

karnataka

ETV Bharat / state

ಖಾಕಿ ಕಣ್ತಪ್ಪಿಸಿ ಕುಣಿಗಲ್‌ ಗಿರಿ 3 ಗಂಟೆ ಫ್ರಿಡ್ಜ್‌ನಲ್ಲಿದ್ದ.. ಸಿನಿಮಾ ಸ್ಟೈಲ್‌ನಲ್ಲಿ ರೌಡಿಶೀಟರ್‌ ಗಾಯಬ್‌! - Kannada news

ಸಿಸಿಬಿ ದಾಳಿ ಮಾಡುತ್ತಿದ್ದಂತೆ ಬರ್ತ್‌ಡೇ ಬಾಯ್ ರೌಡಿಶೀಟರ್ ಗಿರಿ ಕಟ್ಟಡದಿಂದ ಹಾರಿ ಎಸ್ಕೇಪ್ ಆಗಿದ್ದ ಅಂತಾ ಮೊದ್ಲು ಪೊಲೀಸರು ಅನ್ಕೊಂಡಿದ್ರು. ಆದರೆ, ಆ ಮೇಲೆ ಮಾಹಿತಿ ಕೇಳಿ ಪೊಲೀಸರಿಗೆ ಶಾಕ್ ಆಗಿತ್ತು.

ಸಿಸಿಬಿ ಪಬ್ ದಾಳಿ ಸಿನೀಮಿಯ ರಿತಿಯಲ್ಲಿ ರೌಡಿಶೀಟರ್ ಎಸ್ಕೇಪ್

By

Published : Jun 18, 2019, 9:29 PM IST

ಬೆಂಗಳೂರು :ಸಿಸಿಬಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಕುಣಿಗಲ್ ಗಿರಿ ಬಗ್ಗೆ ಸಿಸಿಬಿ ಮಹತ್ವದ ಮಾಹಿತಿಯನ್ನ ಕಲೆ ಹಾಕಿದೆ.

ಕಳೆದ ಭಾನುವಾರ ತಡರಾತ್ರಿ ಭರ್ಜರಿ ಭೇಟೆಯಾಡಿದ ಸಿಸಿಬಿ ಏಕಕಾಲದಲ್ಲಿ ಐದು ಪಬ್‌ಗಳ ಮೇಲೆ ದಾಳಿ ನಡೆಸಿತ್ತು. ಟೈಮ್ಸ್ ಬಿಲ್ಡಿಂಗ್‌ನಲ್ಲಿರುವ ಪಬ್ ಮತ್ತು ಲೈವ್ ಬ್ಯಾಂಡ್‌ನಲ್ಲಿ ರೌಡಿಶೀಟರ್ ಕುಣಿಗಲ್ ಗಿರಿ ಬರ್ತ್‌ಡೇ ಪಾರ್ಟಿಗೆ ಭರ್ಜರಿ ಸಿದ್ದತೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ250 ಡ್ಯಾನ್ಸ್‌ ಗರ್ಲ್ಸ್ ರಕ್ಷಣೆ ಮಾಡಿದ್ರು.

ಸಿಸಿಬಿ ದಾಳಿ ಮಾಡುತ್ತಿದ್ದಂತೆ ಬರ್ತ್‌ಡೇ ಬಾಯ್ ರೌಡಿಶೀಟರ್ ಗಿರಿ ಕಟ್ಟಡದಿಂದ ಹಾರಿ ಎಸ್ಕೇಪ್ ಆಗಿದ್ದ ಅಂತಾ ಮೊದ್ಲು ಪೊಲೀಸರು ಅನ್ಕೊಂಡಿದ್ರು. ಆದರೆ, ಪಬ್ ಹುಡುಗಿಯರ ವಿಚಾರಿಸಿದಾಗ ಸಿಸಿಬಿ ಪೊಲೀಸರಿಗೆ ಶಾಕ್ ಆಗಿತ್ತು.

ಕುಣಿಗಲ್ ಗಿರಿ ಬಾರ್ ಡ್ರೆಸಿಂಗ್ ರೂಮಿನಲ್ಲಿರೋ ಫ್ರಿಡ್ಜ್‌ನಲ್ಲೇ ‌ಅಧಿಕಾರಿಗಳ ಕಣ್ಣು ತಪ್ಪಿಸಿ ಮೂರು ಗಂಟೆಗಳವರೆಗೂ ಅಡಗಿ ಕೂತಿದ್ದ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಸದ್ಯ ನಟೋರಿಯಸ್ ಗಿರಿಗಾಗಿ ಸಿಸಿಬಿ ಕಾರ್ಯಾಚರಣೆ ಮುಂದುವರೆಸಿದೆ.

ABOUT THE AUTHOR

...view details