ಬೆಂಗಳೂರು:ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಬಂಧಿತನಾದ ನಟಿ ರಾಗಿಣಿ ಆಪ್ತ ರವಿಶಂಕರ್ನ ಮಾಜಿ ಪತ್ನಿ ಅರ್ಚನಾ ನಾಯ್ಕ್ಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಮೊಬೈಲ್ ಮೂಲಕ ನೋಟಿಸ್ ಜಾರಿ ಮಾಡಿದೆ.
ರಾಗಿಣಿ ಆಪ್ತ ರವಿಶಂಕರ್ ಮಾಜಿ ಪತ್ನಿಗೆ ಸಿಸಿಬಿ ನೋಟಿಸ್
ಡ್ರಗ್ ದಂಧೆ ಆರೋಪದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಆಪ್ತ ರವಿಶಂಕರ್ ಮಾಜಿ ಪತ್ನಿಗೆ ಸಿಸಿಬಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ನಿನ್ನೆ ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅರ್ಚನಾ ನಾಯ್ಕ್ಗೆ ಸೂಚನೆ ನೀಡಲಾಗಿತ್ತು. ಆದರೆ, ಆರೋಗ್ಯ ಸಮಸ್ಯೆಯ ನೆಪವೊಡ್ಡಿ ಅವರು ವಿಚಾರಣೆಗೆ ಗೈರಾಗಿದ್ದರು.
ಅರ್ಚನಾ ನಾಯ್ಕ್ ರವಿ ಶಂಕರ್ ಮಾಜಿ ಪತ್ನಿಯಾಗಿದ್ದು, ರವಿಶಂಕರ್ ಹಿನ್ನೆಲೆ ಕಲೆ ಹಾಕಲು ಸಿಸಿಬಿ ಅವರಿಗೆ ಬುಲಾವ್ ನೀಡಿದೆ. ಮೂಲಗಳ ಪ್ರಕಾರ, 2010 ರಲ್ಲಿ ಅರ್ಚನಾ ಅವರನ್ನು ಮದುವೆಯಾಗಿದ್ದ ರವಿಶಂಕರ್, 2018 ರಲ್ಲಿ ರಾಗಿಣಿ ಪರಿಚಯವಾದ ಬಳಿಕ ವಿಚ್ಛೇದನ ನೀಡಿದ್ದ. ರಾಗಿಣಿ ಪರಿಚಯವಾದ ಬಳಿಕ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದನ ಅಥವಾ ಮೊದಲೇ ಆತನಿಗೆ ಡ್ರಗ್ಸ್ ಜಾಲದೊಂದಿಗೆ ನಂಟು ಇತ್ತಾ ಎಂಬ ಮಾಹಿತಿಯನ್ನು ಅರ್ಚನಾ ಅವರಿಂದ ಸಿಸಿಬಿ ಅಧಿಕಾರಿಗಳು ಪಡೆಯಲಿದ್ದಾರೆ.
TAGGED:
ಬೆಂಗಳೂರು ಡ್ರಗ್ ಜಾಲ ಪ್ರಕರಣ