ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಬಿರುಸಿನಿಂದ ಸಾಗಿದೆ. ಸದ್ಯ ಸಿಸಿಬಿ ಕಚೇರಿಯಲ್ಲಿ ರಾಗಿಣಿ ದ್ವಿವೇದಿಯನ್ನ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ಅವರು ವಿಚಾರಣೆ ನಡೆಸಿದದರು. ವಿಚಾರಣೆಯ ಹಂತದ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಕೊಡಲು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತೆರಳಿದ್ದಾರೆ.
ಸಿಸಿಬಿ ತನಿಖೆ: ನಗರ ಆಯುಕ್ತರಿಗೆ ಮಾಹಿತಿ ನೀಡಲು ತೆರಳಿದ ಜಂಟಿ ಪೊಲೀಸ್ ಆಯುಕ್ತ
ಸಿಸಿಬಿ ಪೊಲೀಸ್ ಕಚೇರಿಯಲ್ಲಿ ರಾಗಿಣಿ ದ್ವಿವೇದಿಯನ್ನ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ಅವರು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಹಂತದ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಕೊಡಲು ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತೆರಳಿದ್ದಾರೆ.
ಸಿಸಿಬಿ ತನಿಖೆ: ನಗರ ಆಯುಕ್ತರಿಗೆ ಮಾಹಿತಿ ನೀಡಲು ತೆರಳಿದ ಜಂಟಿ ಪೊಲೀಸ್ ಆಯುಕ್ತ
ರಾಗಿಣಿಯನ್ನು ವಶಕ್ಕೆ ಪಡಿಯಬೇಕೇ ಅಥವಾ ಮತ್ತೆ ವಿಚಾರಣೆಗೆ ಕರೆಯಬೇಕಾ ಅನ್ನೋ ಗೊಂದಲದಲ್ಲಿ ಸಿಸಿಬಿ ಪೊಲೀಸರು ಇದ್ದು, ಸದ್ಯ ರಾಗಿಣಿಯ ಹೇಳಿಕೆಗಳನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಸಂದೀಪ್ ಪಾಟೀಲ್ ತಿಳಿಸಲಿದ್ದಾರೆ. ಸಂಜೆ ನಾಲ್ಕರ ವೇಳೆಗೆ ರಾಗಿಣಿಯನ್ನು ವಶಕ್ಕೆ ಪಡಿಬೇಕೋ ಅಥವಾ ಬೇಡವೇ ಎನ್ನುವ ಬಗ್ಗೆ ನಿರ್ಧಾರವಾಗಲಿದೆ.