ಬೆಂಗಳೂರು: ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಮಾಜಿ ಮೇಯರ್ ಸಂಪತ್ ರಾಜ್ ಪತ್ತೆಗೆ ಸಿಸಿಬಿ ಎಲ್ಲೆಡೆ ಶೋಧ ಕಾರ್ಯ ಮುಂದುವರೆಸಿದೆ. ಮುಂಬೈನಲ್ಲಿರೋ ಖಾಸಗಿ ಹೋಟೆಲ್‌ನಲ್ಲಿದ್ದಾರೆಂಬ ಸುಳಿವು ಸಿಕ್ಕ ಮೇಲೆ ಪೊಲೀಸರು ಅಲ್ಲಿಗೆ ತೆರಳಿದ್ದರು. ಆದರೆ, ಸಂಪತ್ ರಾಜ್, ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಹೋಟೆಲ್ ಖಾಲಿ ಮಾಡಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಿಸಿಬಿ ಅಧಿಕಾರಿಗಳು ಇತರೆಡೆ ಶೋಧ ಮುಂದುವರೆಸಿದ್ದಾರೆ.
ರಾಜಕೀಯ ಆ್ಯಂಗಲ್ನಲ್ಲಿಸಿಸಿಬಿಪೊಲೀಸರ ತನಿಖೆ:ಸಿಸಿಬಿಯ 5 ವಿಶೇಷ ತಂಡ ಈಗಾಗಲೇ ಶೋಧ ಕಾರ್ಯಕೈಗೊಂಡಿವೆ. ಆದ್ರೆ, ರಾಜಕೀಯ ನಾಯಕರು ಸಂಪತ್ ಪರ ನಿಂತಿದ್ದಾರೆನ್ನುವ ಗುಮಾನಿಯೂ ಸಿಸಿಬಿಗಿದೆ. ರಾಜಕೀಯ ವ್ಯಕ್ತಿಗಳ ಕೆಲ ರೆಸಾರ್ಟ್ನಲ್ಲಿರಿಬಹುದೆಂಬ ಅನುಮಾನವೂ ಸೃಷ್ಟಿಯಾಗಿದೆ. ಈ ಅನುಮಾನದ ಮೇಲೆ ಫೀಲ್ಡಿಗಿಳಿದ ಪೊಲೀಸರು ಬಿಡದಿ ಸೇರಿ ಅನೇಕ ಕಡೆ ಇರುವ ರೆಸಾರ್ಟ್ಗಳಲ್ಲಿ ಪರಿಶೀಲಿಸಲು ಮುಂದಾಗಿದ್ದಾರೆ.
ಸಂಪತ್ ರಾಜ್ ಕಣ್ಣಮುಚ್ಚಾಲೆ :ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಸಂಪತ್ ರಾಜ್ ಗುರುತಿಸಿಕೊಂಡಿದ್ದಾನೆ. ಈತ ಘಟನೆ ನಡೆದ 70 ದಿನಗಳಿಂದ ಪೊಲೀಸರಿಗೆ ಸಿಗದೆ ಕಣ್ಣಾಮುಚ್ಚಾಲೆಯಾಟ ನಡೆಸುತ್ತಿದ್ದಾನೆ. ಆಗಸ್ಟ್ 11ರ ರಾತ್ರಿ ಡಿಜೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಭಯಾನಕ ಘಟನೆ ನಡೆದಿತ್ತು. ಈ ಬಗ್ಗೆ ಕೇಸ್ ಟೇಕ್ ಓವರ್ ಮಾಡಿದ್ದ ಸಿಸಿಬಿ ಎರಡು ದಿನಗಳ ಬಳಿಕ ಸಂಪತ್ ರಾಜ್‌ಗೆ ನೋಟಿಸ್ ಕೊಟ್ಟಿದ್ದತ್ತು.
ವಿಚಾರಣೆಗೆ ಹಾಜರಾದರೂ ಕೂಡ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಎರಡು ಮೊಬೈಲ್ ಬಳಸುತ್ತಿದ್ದರೂ ಕೂಡ ಒಂದೇ ಮೊಬೈಲ್ ಎಂದು ಸುಳ್ಳು ಹೇಳಿದ್ದರು. ಮೊದಲು ವಿಚಾರಣೆ ನಡೆಸಿ ಸಿಸಿಬಿ ಸುಮ್ಮನೆ ಬಿಟ್ಟಿದ್ದು, ಸಂಪತ್ಗೆ ಪರಾರಿಯಾಗಲು ಬಹುದೊಡ್ಡ ಅಸ್ತ್ರವಾಗಿತ್ತು. ಆಗಸ್ಟ್ 18ರಂದು ಸಂಪತ್ ರಾಜ್ ಆಪ್ತ ಅರುಣ್ ಎಂಬುವರನ್ನು ಬಂಧಿಸಿದಾಗ ಆತ ಸಂಪತ್ ರಾಜ್ ಹೆಸರನ್ನು ಬಾಯ್ಬಿಟ್ಟಿದ್ದ.