ಬೆಂಗಳೂರು:ಸ್ಯಾಂಡಲ್ವುಡ್ನಲ್ಲಿ ಇದೆ ಎನ್ನಲಾದ ಡ್ರಗ್ಸ್ ಜಾಲ ಆರೋಪ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರಾಗಿಣಿ ಆಪ್ತ ಶ್ರೀ ಅಲಿಯಾಸ್ ಸುಬ್ರಮಣಿಯನ್ಗೆ ಮೆಡಿಕಲ್ ಟೆಸ್ಟ್ ನಡೆಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ತನಿಖೆ ವೇಳೆ ಈತ ಸಾಮಾನ್ಯ ಆಸಾಮಿ ಅಲ್ಲ ಅನ್ನೋ ವಿಚಾರ ಬಯಲಾಗಿದೆ.
ಈತನ ವಿಚಾರಣೆಯನ್ನು ಎಸಿಪಿ ಗೌತಮ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಪುನೀತ್ ನಡೆಸುತ್ತಿದ್ದಾರೆ. ಹಾಗೆ ಈ ಆರೋಪಿಯ ಹೇಳಿಕೆ ಆಧಾರದ ಮೇರೆಗೆ ಇನ್ನಷ್ಟು ಪೆಡ್ಲರ್ಗಳ ಹೆಸರುಗಳು ಹೊರಬರಲಿವೆ. ಈತ ಬಾಡಿಗೆ ಪಡೆಯುತ್ತಿದ್ದ ರೆಸಾರ್ಟ್, ಹೋಟೆಲ್, ಫಾರ್ಮ್ ಹೌಸ್ನಲ್ಲಿ ಡ್ರಗ್ಸ್ ಪೂರೈಕೆ ನಿರಂತರವಾಗಿ ನಡೆಯುತ್ತಿತ್ತು. ಹಾಗೆ ಈತ ಬಾಡಿಗೆ ಪಡೆಯುತ್ತಿದ್ದ ರೆಸಾರ್ಟ್ ನಲ್ಲಿ ಪ್ರಭಾವಿಗಳು ಭಾಗಿಯಾಗಿ ನಶೆ ಲೋಕದಲ್ಲಿ ತೇಲುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎನ್ನಲಾಗ್ತಿದೆ. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ನಂತರ ಮುಂದಿನ ನಿರ್ಧಾರವನ್ನು ಅಧಿಕಾರಿಗಳು ಕೈಗೊಳ್ಳಲಿದ್ದಾರೆ.