ಬೆಂಗಳೂರು: ಸಿಸಿಬಿ ಪೊಲೀಸರು ಮೋಸ್ಡ್ ವಾಂಟೆಡ್ ಉಗ್ರನನ್ನ ಬಾಂಬೆ ಜೈಲಿನಿಂದ ಬೆಂಗಳೂರಿಗೆ ಕರೆ ತಂದಿದ್ದಾರೆ.
ಸಿಸಿಬಿ ವಶಕ್ಕೆ ಮೋಸ್ಟ್ ವಾಂಟೆಡ್ ಉಗ್ರ: ಬೆಂಗಳೂರು ಸ್ಫೋಟದಲ್ಲಿತ್ತಾ ಇವನ ಹಸ್ತಕ್ಷೇಪ? - ಸರಣಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಪಿ ಜೈನಲ್ಬುದ್ದೀ
ಬೆಂಗಳೂರು ಸೇರಿದಂತೆ ದೇಶದಲ್ಲಿ ನಡೆದ ಹಲವು ಸರಣಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಪಿ ಜೈನಲ್ಬುದ್ದೀನ್ ಎಂಬ ಮೋಸ್ಟ್ ವಾಟೆಂಡ್ ಉಗ್ರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಬೆಂಗಳೂರಿಗೆ ಕರೆ ತಂದಿದ್ದಾರೆ.
ಪಿ ಜೈನಲ್ಬುದ್ದೀನ್ ಎಂಬ ಮೋಸ್ಟ್ ವಾಟೆಂಡ್ ಶಂಕಿತ ಉಗ್ರ ಬೆಂಗಳೂರಿನಲ್ಲಿ ನಡೆದ ಬಹುತೇಕ ಎಲ್ಲಾ ಸ್ಪೋಟಗಳಿಗೆ ಸ್ಫೋಟಕಗಳನ್ನು ನೀಡಿದ್ದ ಎನ್ನುವ ಆರೋಪ ಇದೆ. ಇದಕ್ಕೆ ಸಂಬಂಧಿಸಿದಂತೆಬಾಡಿ ವಾರೆಂಟ್ ಮೇಲೆ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದಲ್ಲಿ ಮೂವರು ಇನ್ಸಪೆಕ್ಟರ್ ಗಳು 15 ಸಬ್ ಇನ್ಸಪೆಕ್ಟರ್ ಗಳು ತೆರಳಿ ಆತನನ್ನು ಕರೆತಂದು ಸೆಷನ್ಸ್ ಕೋರ್ಟ್ ಗೆ ಹಾಜರು ಪಡಿಸಿ ಒಂಭತ್ತು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ಸರಣಿಸ್ಪೋಟ ಅಲ್ಲದೆ, ದೇಶಾದ್ಯಂತ ನಡೆದ ಹಲವು ಸ್ಪೋಟಗಳಲ್ಲಿ ಭಾಗಿಯಾಗಿದ್ದು, ಮುಂಬೈ ಎಟಿಎಸ್ ಬಾಂಬೆ ಏರ್ ಪೋರ್ಟ್ ನಲ್ಲಿ ಈತನನ್ನ ಬಂಧಿಸಿಲಾಗಿತ್ತು. ಬಂಧಿತನಾಗಿರುವ ಆರೋಪಿ ಇಂಡಿಯನ್ ಮುಜಾಯಿದ್ದೀನ್ ಭಟ್ಕಳದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಮುಜಾಯಿದ್ದೀನ್ ಜೊತೆ ಹಲವಾರು ಅವ್ಯಹಾರ ಮಾಡಿದ್ದಾನೆ ಎನ್ನಲಾಗಿದೆ.