ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣ ಸಂಬಂಧ ತನಿಖೆಗೆ ಇಳಿದಿರುವ ಸಿಸಿಬಿ ಪೊಲೀಸರು, ರಾಗಿಣಿ ಆಪ್ತ ರವಿಶಂಕರ್ ಮೊದಲನೇ ಪತ್ನಿ ಅರ್ಚನಾ ನಾಯಕ್ ಅವರ ವಿಚಾರಣೆಗಾಗಿ ಕಾದಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಆರೋಪಿ ರವಿಶಂಕರ್ ಮಾಜಿ ಪತ್ನಿ ಹೇಳಿಕೆಗಾಗಿ ಕಾದಿರುವ ಸಿಸಿಬಿ - CCB Police Notice
ಡ್ರಗ್ಸ್ ಲಿಂಕ್ ಕೇಸ್ನಲ್ಲಿ ಬಂಧನವಾಗಿರುವ ರವಿಶಂಕರ್ ಮಾಜಿ ಪತ್ನಿ ಅರ್ಚನಾಗೆ ಮತ್ತೆ ನೋಟಿಸ್ ನೀಡಲು ಸಿಸಿಬಿ ಮುಂದಾಗಿದೆ. ಇದಕ್ಕೂ ಮೊದಲು ನೋಟಿಸ್ ನೀಡಿದ್ದಾಗ ವಿಚಾರಣೆಗೆ ಹಾಜರಾಗಿರಲಿಲ್ಲ.
ಈ ಮೊದಲು ಪೊಲೀಸರು ಅರ್ಚನಾಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಸದ್ಯ ಪೂನಾದಲ್ಲಿರುವ ಅರ್ಚನಾ ಅನಾರೋಗ್ಯದ ನೆಪ ಹೇಳಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆ ಮತ್ತೆ ಅರ್ಚನಾಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದ್ದು, ಸದ್ಯದಲ್ಲೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಬಂಧಿತ ರವಿಶಂಕರ್ಗೆ ಅರ್ಚನಾ ವಿಚ್ಛೇದನ ನೀಡಿ ಪೂನಾಗೆ ತೆರಳಿ ವಾಸಿಸುತ್ತಿದ್ದಾರೆ. ಆದರೆ ಈ ವೇಳೆ ಆಕೆಯ ಹೇಳಿಕೆ ಸಹ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಅರ್ಚನಾಗೆ ಸಿಸಿಬಿ ನೋಟಿಸ್ ಹೊರಡಿಸಿತ್ತು. ಆದರೆ ವಿಚಾರಣೆಗೆ ಹಾಜರಾಗದೆ, ಅವರ ಹೇಳಿಕೆ ಪಡೆಯಲು ಸಿಸಿಬಿ ಹರಸಾಹಸ ಪಡುತ್ತಿದೆ.