ಬೆಂಗಳೂರು: ನಗರದ ನ್ಯೂ ಹರ್ಷಿತಾ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 32 ಜನರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಲಬ್ ಮೇಲೆ ಸಿಸಿಬಿ ದಾಳಿ: ಜೂಜಾಟದಲ್ಲಿ ತೊಡಗಿದ್ದ 32 ಜನರ ಬಂಧನ - ಸಿಸಿಬಿ ಅಧಿಕಾರಿಗಳು
ನಗರದ ಕ್ಲಬ್ವೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಜೂಜಾಟದಲ್ಲಿ ತೊಡಗಿದ್ದ 32 ಜನರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಚರಣ್, ದಾಮೋದರರೆಡ್ಡಿ, ಕೃಷ್ಣ, ಯುವರಾಜ್, ಸುನಿಲ್, ರಮೇಶ್, ಮುರಳಿ, ಪೆಂವಲಯ್ಯ, ಭಾಸ್ಕರ್, ಚಿಕ್ಕಬೀರಯ್ಯ, ಚೇತನ್, ಮಣಿ, ಗಿರೀಶ್, ಪ್ರವೀಣ್, ರಾಮು, ಮಣಿ, ಜಗದೀಶ್, ನಾಗರಾಜಾಪ್ಪ ಬಂಧಿತ ಆರೋಪಿಗಳು. ಬಂಧಿತರು ಸಂಜಯನಗರ ಠಾಣಾ ವ್ಯಾಪ್ತಿಯ ಬಿಇಎಲ್ ರಸ್ತೆಯಲ್ಲಿರುವ ನ್ಯೂ ಹರ್ಷಿತಾ ಸ್ಪೋಟ್ಸ್ ಕ್ಲಬ್ನಲ್ಲಿ ಜೂಜಾಟದಲ್ಲಿ ತೊಡಗಿದ್ದರು. ಸುದ್ದಿ ತಿಳಿದು ಅಧಿಕಾರಿಗಳು ಈ ದಾಳಿ ನಡೆಸಿದ್ದು, ಅವರಿಂದ 76,540 ರೂ. ಹಣ ವಶಕ್ಕೆ ಪಡೆದಿದ್ದಾರೆ.