ಬೆಂಗಳೂರು: ಅಂತಾರಾಷ್ಟ್ರೀಯ ಹ್ಯಾಕರ್ ಬಂಧನ ಪ್ರಕರಣ ಬೆನ್ನಲ್ಲೇ ಮತ್ತೊಬ್ಬ ಆರೋಪಿಯ ಬಂಧನವಾಗಿದೆ. ಹ್ಯಾಕರ್ಗೆ ಅತ್ಯಾಪ್ತನಾಗಿದ್ದ ರಾಬಿನ್ ಎಂಬ ಆರೋಪಿ ಪೊಲೀಸರಿಗೆ ಸಿಕ್ಕಿದ್ದಾನೆ. ಈ ಇಬ್ಬರು ಕೇವಲ ಮೂರು ವರ್ಷದಲ್ಲೇ ಪ್ರಾಣ ಸ್ನೇಹಿತರಾಗಿದ್ದರು. ಬಿಟ್ ಕಾಯಿನ್ ದಂಧೆಗೆ ಈತನೇ ಬಿಗ್ ಟ್ರೇಡರ್ ಆಗಿದ್ದ. ಹಾಗೆಯೇ ಇಬ್ಬರೂ ಸೇರಿ ಹಲವಾರು ಸರ್ಕಾರಿ ವೆಬ್ ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾರೆ.
ಈಗಾಗಲೇ ಬಂಧಿತನಾಗಿರುವ ಪ್ರಮುಖ ಶ್ರೀಕಿ ಎಂಬ ಹ್ಯಾಕರ್ ಹ್ಯಾಕ್ ಮಾಡೋ ಪ್ರತಿ ಬಿಟ್ ಕಾಯಿನ್ನನ್ನ ಈತನೇ ನೋಡಿಕೊಳ್ತಿದ್ದ. ಹೀಗೆ ಕಳೆದ ಮೂರು ವರ್ಷಗಳಲ್ಲಿ ಈ ಇಬ್ಬರೂ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಕೇವಲ ವ್ಯವಹಾರಿಕವಾಗಿ ಸ್ನೇಹಿತರಾಗಿದ್ದ ಇಬ್ಬರು, ಕಳೆದ ಆರು ತಿಂಗಳಿನಿಂದ ಪ್ರಾಣ ಸ್ನೇಹಿತರಾಗಿದ್ರು. ಮೂಲತಃ ಕೊಲ್ಕತ್ತಾದವನಾಗಿದ್ದ ರಾಬಿನ್ ಖಂಡೇವಾಲ, ಕಳೆದ ಮೂರು ವರ್ಷಗಳ ಹಿಂದೆ ಬಿಟ್ ಕಾಯಿನ್ ದಂಧೆಯಿಂದ ಹ್ಯಾಕರ್ ಶ್ರೀಕಿಗೆ ಪರಿಚಯವಾಗಿದ್ದ. ಕಳೆದ ಆರು ತಿಂಗಳಿನಿಂದ ಒಂದೇ ರೂಮ್ನಲ್ಲಿ ಇಬ್ಬರು ವಾಸವಿದ್ದರು. ಸದ್ಯ ರಾಬಿನ್ ಖಂಡೇವಾಲನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಇಬ್ಬರು ಬಹುತೇಕ ಸರ್ಕಾರಿ ವೆಬ್ ಸೈಟ್ ಹ್ಯಾಕ್ ಮಾಡಿದ್ದಾರೆ.