ಆಡಿಯೋ ಕದ್ದಾಲಿಕೆ ಪ್ರಕರಣ: ಸಿಬಿಐಯಿಂದ ಇಂದೂ ಮುಂದುವರೆದ ತನಿಖೆ... - ಪೋನ್ ಟ್ಯಾಪಿಂಗ್
ರಾಜ್ಯ ಸರ್ಕಾರ ಪೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಹಸ್ತಾಂತರ ಮಾಡಿದ ಹಿನ್ನೆಲೆ ಪೋನ್ ಟ್ಯಾಪಿಂಗ್ ಪ್ರಕರಣದ ತನಿಖೆಗೆ ಕಳೆದ ಆರು ದಿನಗಳ ಹಿಂದೆ ದಿಲ್ಲಿಯಿಂದ ನಗರಕ್ಕೆ ಕಾಲಿಟ್ಟಿದ್ದ ಸಿಬಿಐ ಟೀಂ ಆರು ದಿನಗಳಿಂದ ಟ್ಯಾಪಿಂಗ್ ಪ್ರಕರಣದ ಮಾಹಿತಿ ಕಲೆ ಹಾಕಿ ಇಂದೂ ಕೂಡಾ ತನಿಖೆಯನ್ನ ಚುರುಕುಗೊಳಿಸಿದೆ.
ಬೆಂಗಳೂರು; ರಾಜ್ಯ ಸರ್ಕಾರ ಪೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಹಸ್ತಾಂತರ ಮಾಡಿದ ಹಿನ್ನೆಲೆ ಪೋನ್ ಟ್ಯಾಪಿಂಗ್ ಪ್ರಕರಣದ ತನಿಖೆಗೆ ಕಳೆದ ಆರು ದಿನಗಳ ಹಿಂದೆ ದಿಲ್ಲಿಯಿಂದ ನಗರಕ್ಕೆ ಕಾಲಿಟ್ಟಿದ್ದ ಸಿಬಿಐ ಟೀಂ ಆರು ದಿನಗಳಿಂದ ಸಿಬಿಐ ಟ್ಯಾಪಿಂಗ್ ಪ್ರಕರಣದ ಮಾಹಿತಿ ಕಲೆ ಹಾಕಿ ಇಂದೂ ಕೂಡಾ ತನಿಖೆಯನ್ನ ಚುರುಕುಗೊಳಿಸಿದೆ.
ಪ್ರಕರಣದ ಕಂಪ್ಲೀಟ್ ದಾಖಲೆಗಳು ಸಿಸಿಬಿಯಿಂದ ಸಿಬಿಐ ವಶಕ್ಕೆ ಪಡೆದಿರುವ ತಂಡ ದಾಖಲೆಗಳ ಆಧಾರದ ಮೇಲೆ ಈಗಾಗ್ಲೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಇನ್ಸ್ಪೆಕ್ಟರ್ ಗಳನ್ನ ಮತ್ತೆ ಇಂದು ಕೂಡ ಕೆಕೆ ಗೆಸ್ಟ್ ಹೌಸ್ ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಮೂವರು ಇನ್ಸ್ಪೆಕ್ಟರ್ ಸಿಸಿಬಿ ಅಧಿಕಾರಿಗಳ ಎದುರು ಕೆಲ ಸತ್ಯಾಂಶ ಬಾಯಿ ಬಿಟ್ಟಿದ್ದಾರೆ. ಅದೇನೆಂದರೆ ಪೋನ್ ಟ್ಯಾಪಿಂಗ್ ನಡೆದ ಸಂದರ್ಭದಲ್ಲಿ ಇದ್ದ ನಗರ ಪೊಲೀಸ್ ಆಯುಕ್ತ ಸೂಚನೆ ಮೇರೆಗೆ ಟ್ಯಾಪಿಂಗ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಸದ್ಯ ಇನ್ಸ್ಪೆಕ್ಟರ್ಗಳ ವಿಚಾರಣೆಗೊಳಪಡಿಸಿದ ಸಿಬಿಐ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರನ್ನ ವಿಚಾರಣೆಗೆ ಸದ್ಯದಲ್ಲೇ ಒಳಪಡಿಸಲಿದ್ದಾರೆ. ಪ್ರಮುಖ ದಾಖಲೆಗಳ ಸಮೇತ ವಿಚಾರಣೆಗೆ ಒಳಪಡಿಸಲು ನಿರ್ಧಾರ ಮಾಡಿದ್ದಾರೆ.
ಮತ್ತೊಂದೆಡೆ ಪೋನ್ ಟ್ಯಾಪಿಂಗ್ ಆಡಿಯೋವನ್ನ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಇನ್ಸ್ಪೆಕ್ಟರ್ಗಳು ಅಂದಿನ ನಗರ ಆಯುಕ್ತ ಅಲೋಕ್ ಕುಮಾರ್ ಅವರಿಗೆ ನೀಡಿದ ಹಿನ್ನೆಲೆ, ನಗರ ಪೊಲೀಸ್ ಆಯುಕ್ತರ ಕಚೇರಿಯ ಕೆಲ ಸಿಬ್ಬಂದಿ ವಿಚಾರಣೆ, ಹಾಗೆಯೇ ಸಿಸಿಟಿವಿಯನ್ನೂ ಪರಿಶೀಲನೆ ನಡೆಸಿದ್ದಾರೆ.